ದೇಶದಲ್ಲಿ ಭ್ರಷ್ಟಾಚಾರ ಶಾಲೆ ನಡೆಸ್ತಿದ್ದಾರೆ ಪ್ರಧಾನಿ ಮೋದಿ: ರಾಹುಲ್ ಗಾಂಧಿ ಟೀಕೆ

WhatsApp Image 2024-04-20 at 1.15.33 PM
Published on

ನವದೆಹಲಿ: ಈಗಾಗಲೇ ಕೆಲವು ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯ ವೋಟಿಂಗ್​ ಪ್ರಾರಂಭವಾಗಿದ್ದು, ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.

"ದೇಶದಲ್ಲಿ ನರೇಂದ್ರ ಮೋದಿ ಭ್ರಷ್ಟಾಚಾರದ ಶಾಲೆಯನ್ನು ನಡೆಸುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಬಿಜೆಪಿ ನಾಯಕರಿಗೆ ಕ್ರ್ಯಾಶ್ ಕೋರ್ಸ್​ ಮಾಡುವುದು ಕಡ್ಡಾಯ ಎನ್ನುವಂತೆ ಮಾಡಿದೆ. 'ಸಂಪೂರ್ಣ ಭ್ರಷ್ಟಾಚಾರ ಸೈನ್ಸ್' ಎಂಬ ಅಧ್ಯಾಯದ ಕುರಿತು ಅವರೇ ಪ್ರತಿಯೊಂದು ಪಾಠದ ಜತೆಗೆ 'ಫಂಡ್ಸ್​​ ಬ್ಯುಸಿನೆಸ್'​ ಅನ್ನು ಸಹ ಬೋಧನೆ ಮಾಡುತ್ತಿದ್ದಾರೆ" ಎಂದು ಟೀಕಿಸಿದರು.

ಬಿಜೆಪಿ ಭ್ರಷ್ಟಾಚಾರದ ಗುಹೆಯಾಗಿದೆ ಎಂದ ವಯನಾಡ್​ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ, "ಅವರಲ್ಲಿರುವ ಕೋರ್ಸ್​ಗಳು ಆಫರ್​ ಮಾಡುವುದು ಯಾವುದೆಂದರೆ, ರೇಡ್ ದಾಳಿ ಮಾಡುವ ಮೂಲಕ ಡೊನೇಷನ್ ಕಲೆಕ್ಷನ್ ಮಾಡುವುದು ಹೇಗೆ? ಬೈಲ್ ಮತ್ತು ಜೈಲ್ ಆಟ ಹೇಗೆ ವರ್ಕ್ ಆಗುತ್ತೆ" ಎಂದು ತಮ್ಮ ಎಕ್ಸ್​ ಖಾತೆಯಲ್ಲಿ (ಈ ಹಿಂದಿನ ಟ್ವಿಟರ್​) ಬರೆದಿದ್ದಾರೆ. ಈ ಮೂಲಕ ಪ್ರಧಾನಿ ಹಾಗೂ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net