ಹತ್ತು ಪುಷ್​ ಅಪ್​ ಹೊಡೆದ ರಾಹುಲ್ ಗಾಂಧಿ; ಕಾರ್ಯಕರ್ತರ ತರಬೇತಿಗೆ ತಡವಾಗಿ ಬಂದದ್ದಕ್ಕೆ ಶಿಕ್ಷೆ| Rahul Gandhi

ವಿಜಯವಾಣಿ - 2025-11-09T202033.593
Published on

ಭೋಪಾಲ್: ಮಧ್ಯ ಪ್ರದೇಶದ ಪಚ್ಮರಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ತರಬೇತಿಗೆ ತಡವಾಗಿ ಬಂದಿದ್ದಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಶಿಕ್ಷೆಯಾಗಿ ಹತ್ತು ಪುಷ್ ಅಪ್ ಹೊಡೆದಿದ್ದಾರೆ ಎಂದು ವರದಿಯಾಗಿದೆ.

ಮಧ್ಯ ಪ್ರದೇಶದ ಪಚ್ಮರಿಯಲ್ಲಿ ಕಾಂಗ್ರೆಸ್ ತನ್ನ ಸಂಘಟನಾ ಶ್ರೇಣಿಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ 'ಸಂಘಥಾನ್ ಸೃಜನ್ ಅಭಿಯಾನ'ವನ್ನು ನಡೆಸಿದೆ. ಈ ಅಭಿಯಾನದ ಕಾರ್ಯಕ್ರಮಕ್ಕೆ ಬಿಹಾರದ ಚುನಾವಣೆ ಪ್ರಚಾರ ಮುಗಿಸಿಕೊಂಡು ರಾಹುಲ್ ಗಾಂಧಿ ತಡವಾಗಿ ಬಂದಿದ್ದಾರೆ.

ಈ ವೇಳೆ ತರಬೇತಿ ಮುಖ್ಯಸ್ಥರಾಗಿದ್ದ ಸಚಿನ್ ರಾವ್, ತಡವಾಗಿ ಬಂದವರು ಶಿಕ್ಷಾ ಕ್ರಮ ಎದುರಿಸಬೇಕು ಎಂದಿದ್ದಾರೆ. ಆಗ ರಾಹುಲ್ ಗಾಂಧಿ ಏನು ಮಾಡಬೇಕು ಎಂದು ಕೇಳಿದಾಗ ಕನಿಷ್ಠ 10 ಪುಷ್ ಅಪ್​ಗಳನ್ನು ಮಾಡಬೇಕು ಎಂದು ತಮಾಷೆ ಮಾಡಿದ್ದಾರೆ.

ಅದಕ್ಕೆ ನಗುತ್ತಾ ರಾಹುಲ್ ಗಾಂಧಿ ತಕ್ಷಣ, ತರಬೇತಿ ಮುಖ್ಯಸ್ಥರ ಆದೇಶದಂತೆ 10 ಪುಷ್ ಅಪ್​ಗಳನ್ನು ಹೊಡೆದಿದ್ದಾರೆ. ಅವರ ಜೊತೆ ತರಬೇತಿ ತಡವಾಗಿ ಬಂದ ಜಿಲ್ಲಾ ಅಧ್ಯಕ್ಷರುಗಳು ಸಹ ರಾಹುಲ್ ಗಾಂಧಿ ಜೊತೆಗೂಡಿ ಪುಷ್ ಅಪ್ ಹೊಡೆಯಲು ಪ್ರಯತ್ನಿಸಿದ್ದಾರೆ, ಇದರಿಂದ ತಮ್ಮ ನಾಯಕನ ಜೊತೆಗೂಡಿ ಕಾಂಗ್ರೆಸ್​ ಕಾರ್ಯಕರ್ತರು  ಮೋಜಿನ ವಾತಾವರಣ ಅನುಭವಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net