ಮಕ್ಕಳಿಗೆ ಕಳ್ಳ-ಪೊಲೀಸ್ ಆಟಕ್ಕೆ ಹಚ್ಚಿ ಅತ್ತೆಯನ್ನು ಕುರ್ಚಿಗೆ ಕಟ್ಟಿ ಬೆಂಕಿ ಹಚ್ಚಿದ ಸೊಸೆ; ಬಂಧನ| Arrested

ವಿಜಯವಾಣಿ - 2025-11-08T100058.584
Published on

ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಪೆಂಡುರ್ತಿಯಲ್ಲಿರುವ ಅಪಾರ್ಟ್​ಮೆಂಟ್​ವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಕ್ಕಳನ್ನು ಕಳ್ಳ-ಪೊಲೀಸ್ ಆಟಕ್ಕೆ ಹಚ್ಚಿ, 63 ವರ್ಷದ ಅತ್ತೆಯನ್ನು ಕುರ್ಚಿಗೆ ಕಟ್ಟಿಗೆ ಬೆಂಕಿ ಹಚ್ಚಿ ಕೊಂದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ(Arrested) ಎಂದು ಭಾನುವಾರ(ನ. 09) ವರದಿಯಾಗಿದೆ.

ನ. 07ರಂದು ಬೆಳಗ್ಗೆ 8.45ರ ಸುಮಾರಿಗೆ ಈ ಘಟನೆ ನಡೆದಿದೆ. ಜಯಂತಿ ಕನಕ ಮಹಾಲಕ್ಷ್ಮಿ(63) ಕೊಲೆಯಾದ ಅತ್ತೆ. ಪೆಂಡುರ್ತಿಯ ಅಪ್ಪಣ್ಣಪಾಲಂ ನಿವಾಸಿ 30 ವರ್ಷದ ಜಯಂತಿ ಲಲಿತಾ ದೇವಿ ಆರೋಪಿಯಾಗಿದ್ದು, ಪೊಲೀಸರ ಮುಂದೆ ಶರಣಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ಘಟನೆ ಬಗ್ಗೆ ಮೃತ ಮಹಿಳೆಯ ಮಗ ಅರ್ಚಕ ಜಯಂತಿ ಸುಬ್ರಹ್ಮಣ್ಯಂ, ತನ್ನ ಪತ್ನಿ ನಿರಂತರ ಕೌಟುಂಬಿಕ ಕಲಹದಿಂದ ಕೋಪಗೊಂಡು ಈ ಕೃತ್ಯ ಎಸಗಿದ್ದಾಳೆ ಎಂದು ದೂರು ನೀಡಿದ್ದಾರೆ. ಪೆಂಡುರ್ತಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 103ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಲಲಿತಾ ದೇವಿ ತನ್ನ ತಪ್ಪೊಪ್ಪಿಗೆಯಲ್ಲಿ ಮದುವೆಯಾದಾಗಿನಿಂದ ತನಗೆ ಮೌಖಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.  ಮನೆಯ ಜವಾಬ್ದಾರಿಗಳು ಮತ್ತು ಸ್ವಚ್ಛತೆಯ ಸಮಸ್ಯೆಗಳು ಆಗಾಗಾ ಗಲಾಟೆಗೆ ಕಾರಣವಾಗುತ್ತಿದ್ದವು ಎಂದು ಹೇಳಿದ್ದಾರೆ.

ಆರೋಪಿಯು ನ. 06ರ ಸಂಜೆ ಗೋಸಲ ಜಂಕ್ಷನ್‌ನಲ್ಲಿರುವ ಪೆಟ್ರೋಲ್ ಬಂಕ್‌ನಿಂದ ತನ್ನ ಕಾರಿಗೆಂದು ಪೆಟ್ರೋಲ್ ಖರೀದಿಸಿದ್ದಳು. ಮರುದಿನ ಬೆಳಿಗ್ಗೆ ಆಕೆಯ ಪತಿ ಮತ್ತು ಸೋದರಳಿಯ ಕೆಲಸಕ್ಕೆ ಹೋದ ಬಳಿಕ ತನ್ನ ಅತ್ತೆ ಮತ್ತು ಮಕ್ಕಳನ್ನು ಕಳ್ಳ-ಪೊಲೀಸ್ ಆಟವಾಡೋಣ ಎಂದು ಹೇಳಿದ್ದಾಳೆ. ಈ ವೇಳೆ ವೃದ್ಧ ಮಹಿಳೆಯ ಕಣ್ಣಿಗೆ ಬಟ್ಟೆ ಕಟ್ಟಿ, ಬಳಿಕ ಆಕೆಯನ್ನು ಕುರ್ಚಿಗೆ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ.  8 ವರ್ಷದ ಮೊಮ್ಮಗಳು ಶ್ರೀನಯನ ತನ್ನ ಅಜ್ಜಿಯನ್ನು ರಕ್ಷಿಸಲು ಪ್ರಯತ್ನ ಪಟ್ಟಾಗ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net