ದಲಿತರ ಮನೆಯಲ್ಲಿ ಅಡುಗೆ ಮಾಡಿದ ರಾಹುಲ್ ಗಾಂಧಿ! Rahul Gandhi Cooking Session

Rahul Gandhi
Published on

ಮಹಾರಾಷ್ಟ್ರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಅಜಯ್ ತುಕಾರಾಂ ಸನಡೆ ಮತ್ತು ಅಂಜನಾ ತುಕಾರಾಂ ಸನಡೆ ಅವರ ಮನೆಗೆ ಭೋಜನಕ್ಕೆ ತೆರಳಿದ್ದರು. ದಲಿತರ ಮನೆಯೊಂದರಲ್ಲಿ ಊಟ ಮಾಡಿದ ಅವರ ಇತ್ತೀಚಿನ ಸಂವಾದದ ವೀಡಿಯೊವನ್ನು ರಾಹುಲ್ ಗಾಂಧಿಯವರು ( Rahul Gandhi Cooking Session ) ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ದಲಿತ ಕುಟುಂಬವನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿ ಅವರ ಜೊತೆ ಅಡುಗೆ ಮಾಡಿ ಜಾತಿ, ತಾರತಮ್ಯ ಸೇರಿದಂತೆ ನಾನಾ ವಿಷಯಗಳ ಕುರಿತು ಚರ್ಚೆ ನಡೆಸಿದರು.

“ಇಂದಿಗೂ ದಲಿತರ ಅಡುಗೆ ಮನೆಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ದಲಿತರು ಏನು ತಿನ್ನುತ್ತಾರೆ? ಅವರು ಹೇಗೆ ಅಡುಗೆ ಮಾಡುತ್ತಾರೆ ಎಂಬುದು ಎಂಬುದು ಯಾರಿಗೂ ತಿಳಿದಿಲ್ಲ. ಸಾಮಾಜಿಕ ಮತ್ತು ರಾಜಕೀಯ ಪ್ರಾಮುಖ್ಯತೆಯ ಬಗ್ಗೆ ಆಸಕ್ತಿ ಹೊಂದಿದ್ದೇನೆ. ನಾನು ಅಜಯ್ ತುಕಾರಾಂ ಸನಡೆ ಮತ್ತು ಅಂಜನಾ ತುಕಾರಾಂ ಸನದೆ ಅವರೊಂದಿಗೆ ಮಧ್ಯಾಹ್ನ ಊಟ ಮಾಡಿದ್ದೇನೆ . ಇವರು ನನ್ನನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ತಮ್ಮ ಮನೆಗೆ ಅಡುಗೆಮನೆಯಲ್ಲಿ ಸಹಾಯ ಮಾಡಲು ಆಹ್ವಾನಿಸುವ ಮೂಲಕ ನನ್ನನ್ನು ಗೌರವಿಸಿದರು. ನಾವು ಒಟ್ಟಿಗೆ ‘ಚಾನೆ ಕೆ ಸಾಗ್ ಕಿ ಸಬ್ಜಿ’, ‘ಹರಭಾರಿಯಾಚಿ ಭಾಜಿ’ ಮತ್ತು ಬದನೆಯೊಂದಿಗೆ ದಾಲ್’ ಅಡುಗೆ ಮಾಡಿದ್ದೇವೆ” ಎಂದು ರಾಹುಲ್ ಗಾಂಧಿ ವೀಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

“ಸಂವಿಧಾನವು ಬಹುಜನರಿಗೆ ಪಾಲು ಮತ್ತು ಹಕ್ಕುಗಳನ್ನು ನೀಡಿದೆ. ನಾವು ಆ ಸಂವಿಧಾನವನ್ನು ರಕ್ಷಿಸುತ್ತೇವೆ. ಆದರೆ, ಪ್ರತಿಯೊಬ್ಬ ಭಾರತೀಯರು ತಮ್ಮ ಹೃದಯದಲ್ಲಿ ಸಹೋದರತ್ವದ ಮನೋಭಾವದಿಂದ ಶ್ರಮಿಸಿದಾಗ ಮಾತ್ರ ಸಮಾಜದಲ್ಲಿ ಎಲ್ಲರಿಗೂ ನಿಜವಾದ ಒಳಗೊಳ್ಳುವಿಕೆ ಮತ್ತು ಸಮಾನತೆ ಸಾಧ್ಯ” ಎಂದು ಅವರು ಹೇಳಿದರು. ವೀಡಿಯೊದಲ್ಲಿ, ರಾಹುಲ್ ಗಾಂಧಿ ಅಡುಗೆಮನೆಯಲ್ಲಿ ಸಹಾಯ ಮಾಡಿದ್ದು, ನಂತರ ಅವರ ಮನೆಯಲ್ಲಿ ಕುಟುಂಬದೊಂದಿಗೆ ಊಟ ಮಾಡುವುದನ್ನು ಕಾಣಬಹುದು. ರಾಹುಲ್ ಗಾಂಧಿ ಊಟ ಮಾಡುವಾಗ ಹೆಚ್ಚು ಕರಿ ತಿನ್ನುವುದಿಲ್ಲ ಎನ್ನುವುದನ್ನು ಗಮನಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net