ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ...

ragini
Published on

ಬೆಂಗಳೂರು: ಡ್ರಗ್ಸ್ ಕೇಸ್​ನಲ್ಲಿ ಬಂಧನಕ್ಕೊಳಪಟ್ಟಿರುವ 'ಮಾದಕ' ನಟಿ ರಾಗಿಣಿ ದ್ವಿವೇದಿ, ಮೆಡಿಕಲ್ ಟೆಸ್ಟ್ ವೇಳೆ ತನ್ನ ವರಸೆ ಬದಲಿಸಿ ಸಿಕ್ಕಿಬಿದ್ದಿದ್ದಾರೆ.

ಗುರುವಾರ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಟಿ ರಾಗಿಣಿಯನ್ನು ಡೋಪಿಂಗ್ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಲ್ಯಾಬ್ ಟೆಸ್ಟ್​ನಲ್ಲಿ ನಟಿಯ ಯೂರಿನ್ ರಹಸ್ಯ ಬಯಲಾಗಿದ್ದು, ''ಡೋಂಟ್​ ಚೀಟ್​ ರಾಗಿಣಿ'' ಎಂದು ವೈದ್ಯರು ಮತ್ತು ಪೊಲೀಸರು ಖಡಕ್​ ವಾರ್ನಿಂಗ್ ಕೊಟ್ಟು ಇಂದು(ಶುಕ್ರವಾರ) ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದ್ದಾರೆ. ಯೂರಿನ್​ ಟೆಸ್ಟ್​ ವೇಳೆ ರಾಗಿಣಿ ಮಾಡಿದ ಕಿತಾಪತಿ ಏನು ಗೊತ್ತಾ?

ತಪ್ಪನ್ನ ಮುಚ್ಚಿಕೊಳ್ಳಲು ಯತ್ನಿಸಿದ ರಾಗಿಣಿ, ಯೂರಿನ್​ ಟೆಸ್ಟ್ ವೇಳೆ ಖತರ್ನಾಕ್​ ಐಡಿಯಾ ಉಪಯೋಗಿಸಿದ್ದಾರೆ. ಯೂರಿನ್ ಟೆಸ್ಟ್​ಗೆ ಕಳುಹಿಸುವಾಗಲೇ ಡ್ರಾಮಾ

ಮಾಡದಂತೆ ಸಿಸಿಬಿ ಅಧಿಕಾರಿಗಳು ವಾರ್ನಿಂಗ್​ ಕೊಟ್ಟಿದ್ದರು. ಆದರೂ ರಾಗಿಣಿ ಯೂರಿನ್ ಬದಲು ನೀರು ತುಂಬಿಸಿ ಕೊಟ್ಟಿದ್ದರು. ಲ್ಯಾಬ್ ಟೆಸ್ಟ್​ನಲ್ಲಿ ನಟಿಯ ಯೂರಿನ್ ರಹಸ್ಯ ಬಯಲಾಗಿದ್ದು, ವೈದ್ಯರು- ಪೊಲೀಸರೇ ಶಾಕ್​ ಆದರು.

ಮೂತ್ರಕ್ಕೆ ನೀರು ಮಿಕ್ಸ್ ಮಾಡಿ ಯಾಮಾರಿಸಲು ಯತ್ನಿಸಿದ ರಾಗಿಣಿಗೆ ಮತ್ತೊಮ್ಮೆ ವಾರ್ನಿಂಗ್​ ಕೊಟ್ಟ ವೈದ್ಯರು ಮತ್ತು ಪೊಲೀಸರು, 'ನೀವು ಬರೀ ನೀರು ತುಂಬಿ ಕೊಟ್ಟಲ್ಲಿ ಅಥವಾ ನೀರು ಮಿಕ್ಸ್ ಮಾಡಿ ಯೂರಿನ್ ನೀಡಿದ್ರೆ ಲ್ಯಾಬ್​ನಲ್ಲಿ ಎಲ್ಲವೂ ಗೊತ್ತಾಗುತ್ತೆ. ಈ ಡ್ರಾಮಾ ಬಿಟ್ಟು ಟೆಸ್ಟ್​ಗೆ ಮೂತ್ರ ಕೊಡಿ ಎಂದು ಎಚ್ಚರಿಸಿದರು. ಎರಡನೇ ಬಾರಿ ಸಂಗ್ರಹಿಸಿದ ಯೂರಿನ್​ನಲ್ಲಿ ನೀರು ಮಿಕ್ಸ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಅಧಿಕಾರಿಗಳು ಬಳಿಕ ನಟಿಯನ್ನು ಕರೆದೊಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net