'ಮಾದಕ' ನಟಿಗಾಗಿ ಹೆಂಡತಿಯನ್ನೇ ತೊರೆದ ರವಿಶಂಕರ್​!

Ragini
Published on

ಬೆಂಗಳೂರು: ಡ್ರಗ್ಸ್​ 'ಬಣ್ಣ'ದಾಟದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಲೇ ಇವೆ. ನನಗೆ ಮದುವೆ ಆಗಿಲ್ಲ ಎಂದ ಬೆನ್ನಲ್ಲೇ ನಟಿ ಸಂಜನಾರ 'ಗಂಡ-ಹೆಂಡ್ತಿ' ರಹಸ್ಯ ಬಯಲು ಮಾಡುವಂತಹ ಫೋಟೋವೊಂದು ನಿನ್ನೆ(ಗುರುವಾರ)ಯಷ್ಟೇ ವೈರಲ್​ ಆಗಿತ್ತು. ಇದೀಗ ನಟಿ ರಾಗಿಣಿ ಆಪ್ತನ ಮತ್ತೊಂದು ಪುರಾಣ ಬಯಲಾಗಿದೆ.

ಆರ್​ಟಿಒ ಕಚೇರಿಯಲ್ಲಿ ದ್ವಿತೀಯ ದರ್ಜೆ ಕ್ಲರ್ಕ್ ಆಗಿದ್ದ ರವಿಶಂಕರ್​ ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿಯ ಆಪ್ತ. ಸದ್ಯ ಡ್ರಗ್ಸ್​ ಕೇಸ್​ನಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದು, ಸರ್ಕಾರಿ ಕೆಲಸದಿಂದ ಅಮಾನತಿಗೂ ಒಳಗಾಗಿದ್ದಾನೆ. ತಂದೆಯ ನಿಧನದ ಬಳಿಕ ಅನುಕಂಪದ ಆಧಾರದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಇವನಿಗೆ ಬರುತ್ತಿದ್ದದ್ದು ಮಾಸಿಕ ಸುಮಾರು 30 ಸಾವಿರ ಸಂಬಳ. ಆದರೆ ಈತ ನಡೆಸುತ್ತಿದ್ದದ್ದು ಮಾತ್ರ ಐಶಾರಾಮಿ ಜೀವನ. ಮದುವೆ ಆಗಿ ಮಗು ಇದ್ದರೂ ಪತ್ನಿಯನ್ನು ತೊರೆದಿದ್ದ. ಇದೆಲ್ಲವೂ ನಟಿ ರಾಗಿಣಿಗಾಗಿ!

'ಮಾದಕ' ನಟಿ ರಾಗಿಣಿ ದ್ವಿವೇದಿ ಜತೆ ಆಪ್ತತೆ ಬೆಳೆಸಿಕೊಂಡಿದ್ದ ರವಿಶಂಕರ್​ ತನ್ನ ಹೆಂಡತಿಯಿಂದ ದೂರವಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮಗು ಇದ್ದರೂ ಕೂಡ ನಿರ್ಲಕ್ಷಿಸಿದ್ದ. ನಟಿ ಜತೆ ಪಾರ್ಟಿಯಲ್ಲೇ ಸದಾ ಬಿಜಿಯಾಗಿರುತ್ತಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net