ಕ್ರಿಶ್ಚಿಯನ್​​ ಧರ್ಮಕ್ಕೆ ಮತಾಂತರ ಆಗಿ ಒಂದೇ ದಿನಕ್ಕೆ ಹಿಂದೂ ಧರ್ಮಕ್ಕೆ ಮರಳಿದ ನಟಿ ರಾಗಿಣಿ

Ragini Khanna
Published on

ಮುಂಬೈ: ದೂರದರ್ಶನ ನಟಿ ರಾಗಿಣಿ ಖನ್ನಾ, ಭಾರತೀಯ ದೂರದರ್ಶನದಲ್ಲಿ ಚಿರಪರಿಚಿತ ಮುಖ. ಬಾಲಿವುಡ್​​ ನಟ ಗೋವಿಂದ್ ಅವರ ಅಕ್ಕನ ಮಗಳು ರಾಗಿಣಿ ಖನ್ನಾ  ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತಗೊಂಡಿದ್ದಾರೆ ಎಂದು ವರದಿಯಾಗಿತ್ತು. ಮತಾಂತರ ಗೊಂಡ ಒಂದೇ ದಿನಕ್ಕೆ ಅವರು ವಾಪಸ್ಸು ಹಿಂದೂ ಧರ್ಮಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.

ಅಭಿಮಾನಿಯೊಬ್ಬ ಒಂದು ಪೋಸ್ಟ್ ಮಾಡಿದ್ದ, ಅದನ್ನು ನಾನು ರೀಪೋಸ್ಟ್ ಮಾಡಿ ಸಂಕಟಕ್ಕೆ ಸಿಲುಕಿಕೊಂಡೆ. ನಾನು ಯಾವುದೇ ಕಾರಣಕ್ಕೂ ಮತಾಂತರಗೊಂಡಿಲ್ಲ. ಅದೆಲ್ಲವೂ ಸುಳ್ಳು. ಅಭಿಮಾನಿಯ ಎಡವಟ್ಟಿನಿಂದಾಗಿ ನಾನು ನೋವು ಅನುಭವಿಸಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ರಾಗಿಣಿ ಒಂದು ದಿನದ ಹಿಂದೆಯಷ್ಟೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ (convert) ಆಗಿ, ಎಲ್ಲರಿಗೂ ಶಾಕ್ ನೀಡಿದ್ದಾರೆ ಎಂದು ವರದಿಯಾಗಿತ್ತು. ಮತಾಂತರವಾಗಿ ತಪ್ಪು ಮಾಡಿದೆ, ನನ್ನ ತಪ್ಪಿನ ಅರಿವಾಗಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದೇನೆ ಎಂದು ಅವರು ಹೇಳಿದ್ದಾರೆ ಎಂದು ಹೇಳಲಾಗಿತ್ತು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಅವರು ಕ್ಷಮೆ ಕೇಳಿದ್ದಾರೆ. ಸನಾತನ ಧರ್ಮವೇ ಶ್ರೇಷ್ಠವೆಂದು ಅವರು ಹೇಳಿಕೊಂಡಿದ್ದಾರೆ. ಬೇರೆ ಧರ್ಮಕ್ಕೆ ಮತಾಂತರವಾದ ನಂತರ, ಇಂದಿನಿಂದ ಈ ಧರ್ಮವನ್ನು ಪಾಲಿಸುತ್ತೇನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಮತಾಂತರಗೊಳ್ಳುವ ಕುರಿತಂತೆ ಹಾಕಿದ್ದ ಪೋಸ್ಟ್ ಅನ್ನು ಅವರು ಡಿಲಿಟ್ ಮಾಡಿದ್ದು, ಹಿಂದೂ (Hindu) ಧರ್ಮದ ಬಗ್ಗೆ ಮಾಡಲಾದ ಭಾಷಣವನ್ನು ಅವರು ಪೋಸ್ಟ್ ಮಾಡಿ, ಅದಕ್ಕೆ ತಮ್ಮ ತಮ್ಮ ಫೋಟೋ ಅಂಟಿಸಿದ್ದರು. ಈಗ ಎಲ್ಲ ಗೊಂದಲಕ್ಕೂ ಅವರು ತೆರೆ ಎಳೆದಿದ್ದಾರೆ.

ಸುಳ್ಳು ಸುದ್ದಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಅವರು, “ನಟಿಯಾಗಿ ನಾವು ಹೆಚ್ಚು ಜಾಗರೂಕರಾಗಿರಬೇಕು. ಈ ಘಟನೆಯಿಂದ ನಾನು ಕಲಿತ ಪಾಠ ಇದು. ಕಳೆದ ಕೆಲವು ತಿಂಗಳುಗಳಿಂದ, ನಾನು ನನ್ನ ಅಭಿಮಾನಿಗಳ ಪೋಸ್ಟ್‌ಗಳನ್ನು ಮರು-ಪೋಸ್ಟ್ ಮಾಡುತ್ತಿದ್ದೇನೆ. ಆದರೆ, ಇದು ಸಮಸ್ಯೆಯಾಗುತ್ತದೆ ಮತ್ತು ನನ್ನ ಗುರುತಿನ ಮೇಲೆ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ನಾನು ಭಾವಿಸಿರಲಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net