'ತುಪ್ಪ'ದ ಬೆಡಗಿ ರಾಗಿಣಿ ಮತ್ತೆ ಪೊಲೀಸ್​ ಕಸ್ಟಡಿಗೆ ಹೋಗಲು ಆ 7 ಕಾರಣ ಇಲ್ಲಿದೆ

ragini
Published on

ಬೆಂಗಳೂರು: ಡ್ರಗ್ಸ್​ ಮಾಫಿಯಾ ಪ್ರಕರಣದಡಿ ಸಿಸಿಬಿ ಬಂಧನದಲ್ಲಿರುವ ಸ್ಯಾಂಡಲ್​ವುಡ್​ನ 'ಮಾದಕ' ನಟಿ ರಾಗಿಣಿ ದ್ವಿವೇದಿಯನ್ನು ಮತ್ತೆ ಐದು ದಿನ ಪೊಲೀಸ್​ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ.

ಪೊಲೀಸ್ ಕಸ್ಟಡಿಗೆ ಪಡೆಯಲು ಸಿಸಿಬಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಮಧ್ಯಾಹ್ನ 2ಕ್ಕೆ ವಿಚಾರಣೆ ನಡೆಸಿದ 1ನೇ ಎಸಿಎಂಎಂ ಕೋರ್ಟಿನ ನ್ಯಾಯಾಧೀಶ ಜಗದೀಶ್​, ಸೆ.11ರವರೆಗೂ ರಾಗಿಣಿಯನ್ನು ಸಿಸಿಬಿ ವಶಕ್ಕೆ ಪಡೆಯುವಂತೆ ಆದೇಶಿಸಿದ್ದಾರೆ. ಈ ವೇಳೆ 10 ದಿನಗಳ ಕಾಲ ರಾಗಿಣಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದ ಸಿಸಿಬಿ, ಯಾವ ಕಾರಣಕ್ಕೆ ರಾಗಿಣಿಯನ್ನು ಪೊಲೀಸ್​ ಕಸ್ಟಡಿಗೆ ಪಡೆಯುವ ಅವಧಿ ವಿಸ್ತರಿಸಬೇಕು ಎಂಬುದನ್ನು ಉಲ್ಲೇಖಿಸಿತ್ತು. ಅದರ ಡಿಟೇಲ್ಸ್​ ಇಲ್ಲಿದೆ. ಇದನ್ನೂ ಓದಿರಿ ಡ್ರಗ್ಸ್ ಮಾಫಿಯಾ ಕಾರಣಕ್ಕೆ ಬೆಂಗಳೂರು ಕಾಂಗ್ರೆಸ್ ನಾಯಕರಿಗೆ ಶುರುವಾಗಿದೆ ಟೆನ್ಷನ್!

ಸದ್ಯದ ಕಸ್ಟಡಿ ವೇಳೆ ತನಿಖೆಗೆ ರಾಗಿಣಿ ಸಹಕರಿಸಿಲ್ಲ. ರಾಗಿಣಿ ಜೊತೆ ಮತ್ತಷ್ಟು ಜನರ ಲಿಂಕ್ ಇರುವುದು ಪತ್ತೆಯಾಗಿದೆ. ಅವರ ಬಳಿಯಿಂದ ಕೆಲ ವಸ್ತುಗಳನ್ನು ಸೀಜ್ ಮಾಡುವುದು ಬಾಕಿಯಿದೆ. ಡ್ರಗ್ಸ್​ ಮಾಫಿಯಾದಲ್ಲಿ ರಾಗಿಣಿ ಪಾತ್ರದ ಬಗ್ಗೆ ಅವರ ವಿರುದ್ಧ ಸಾಕಷ್ಟು ಸಾಕ್ಷಿ ಲಭ್ಯವಿದೆ. ಡ್ರಗ್ಸ್ ಸೇವೆನೆಗೆ ಸಂಬಂಧಿಸಿದಂತೆ ಕೆಲ ಸಾಕ್ಷಿಗಳು ಹೇಳಿಕೆ ನೀಡಿದ್ದಾರೆ. ಅಲ್ಲದೆ ಅವರ ವಿರುದ್ಧ ಇತರ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಈ ಎಲ್ಲದರ ಬಗ್ಗೆಯೂ ರಾಗಿಣಿ ಅವರಿಂದ ಸ್ಪಷ್ಟನೆ ಕೇಳಬೇಕಾಗಿದೆ. ಹಾಗಾಗಿ ಅವರನ್ನು 10 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಬೇಕು ಎಂದು ಕೋರ್ಟ್​ಗೆ ಸಿಸಿಬಿ ಪೊಲೀಸರು ಮನವಿ ಮಾಡಿದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು 10 ದಿನದ ಬದಲು ಇನ್ನು 5 ದಿನ ಅಂದರೆ ಸೆ.11ರವರೆಗೂ ನಟಿ ರಾಗಿಣಿಯನ್ನು ಸಿಸಿಬಿ ವಶಕ್ಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net