ತುಪ್ಪದ ಬೆಡಗಿ ರಾಗಿಣಿಯ ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್​

Ragini Dvivedi
Published on

ಬೆಂಗಳೂರು: ಡ್ರಗ್ಸ್​ ಮಾಫಿಯಾದಲ್ಲಿ ಅರೆಸ್ಟ್​ ಆಗಿರುವ ನಟಿ ರಾಗಿಣಿ ದ್ವಿವೇದಿಯನ್ನು ಮತ್ತೆ 5 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದೆ. ಇದರ ಬೆನ್ನಲ್ಲೇ ರಾಗಿಣಿ ದ್ವಿವೇದಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್​ ಪಡದಿದ್ದಾರೆ.

ನಿರೀಕ್ಷಣಾ ಜಾಮೀನು ಅರ್ಜಿಯನ್ನು ರಾಗಿಣಿ ಬಂಧನಕ್ಕೂ ಮೊದಲೇ ಸಲ್ಲಿಸಲಾಗಿತ್ತು. ಆದರೆ ರಾಗಿಣಿ ಈಗಾಗಲೇ ಬಂಧನವಾಗಿರುವ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್​​ನಿಂದ ಹಿಂಪಡೆದಿದ್ದಾರೆ.

ರಾಗಿಣಿ ತಂದೆ ಕರ್ನಲ್​ ರಾಕೇಶ್​ ದ್ವಿವೇದಿ ಅವರು ಅರ್ಜಿ ವಾಪಸ್​ ಪಡೆಯಲು ಹೇಳಿದ್ದರಿಂದ ಹಿಂಪಡೆಯಲಾಗಿದೆ. ಮುಂಬೈನಿಂದ ಬೇರೆ ವಕೀಲರು ಬರುತ್ತಾರೆ ಎಂದು ರಾಗಿಣಿ ಪರ ವಕೀಲ ಸುದರ್ಶನ್​ ದ್ವಿವೇದಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net