

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ನಲ್ಲಿ ಆರೋಪಿಗಳಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ದಿನಕ್ಕೊಂದು ಹೊಸ ಕ್ಯಾತೆ ತೆಗೆಯುತ್ತಿದ್ದಾರೆ. ರಾಗಿಣಿಯವರಂತೂ ಯೂರಿನ್ ಬದಲು ನೀರು ಕೊಟ್ಟು ಕಿರಿಕ್ ಮಾಡಿದರು..ನಮ್ಮ ಲೈಫೇ ಬರ್ನ್ ಆಯಿತು ಎಂದು ಅಲವತ್ತುಕೊಂಡರು.
ಇದೀಗ ನಟಿಮಣಿಯರಿಬ್ಬರೂ ತಮಗೆ ಅನಾರೋಗ್ಯ ಎಂದು ಹೇಳುತ್ತಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಇಬ್ಬರೂ ಏಕಕಾಲಕ್ಕೆ ಆರೋಗ್ಯ ಸರಿಯಿಲ್ಲ ಎನ್ನುತ್ತಿದ್ದಾರೆ. ಬೆಳಗ್ಗೆಯಿಂದಲೂ ಶೀತ, ಜ್ವರ, ಕೆಮ್ಮು ಎನ್ನುತ್ತ, ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೋಧ ಮತ್ತು ಇಬ್ಬರು ಬಾಲಕಿಯರು ಪೊಲೀಸ್ ವಶಕ್ಕೆ
14ನೇ ತಾರೀಖಿಗೆ ಇವರಿಬ್ಬರ ಪೊಲೀಸ್ ಕಸ್ಟಡಿ ಅವಧಿ ಮುಗಿಯುತ್ತಿದ್ದು, ನಂತರ ಜೈಲು ಸೇರುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಅದರ ಮೊದಲೇ ಆಸ್ಪತ್ರೆ ಸೇರಲು ನಾಟಕವಾಡುತ್ತಿರಬಹುದಾ ಎಂಬ ಅನುಮಾನವೂ ಕಾಡುತ್ತಿದೆ. ಒಟ್ಟಾರೆ ಈ ಇಬ್ಬರೂ ನಟಿಯರು ತನಿಖಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. (ದಿಗ್ವಿಜಯ ನ್ಯೂಸ್)