VIDEO / ವೆಸ್ಟರ್ನ್ ಡ್ರೆಸ್ ಧರಿಸಿದ್ರು ಕರಿಮಣಿ ಹಾಕುವುದು ಮರೆಯಲಿಲ್ಲ ಅಂಬಾನಿ ಸೊಸೆ; ರಾಧಿಕಾ ಬಗ್ಗೆ ಮೆಚ್ಚುಗೆ ವ್ಯಕ್ತ..

Radhika Merchant
Published on

ನವದೆಹಲಿ: ವಿವಾಹಿತ ಮಹಿಳೆಯರು ಮಂಗಳಸೂತ್ರ ಧರಿಸುವುದು ಹಿಂದೂ ಸಂಸ್ಕೃತಿಯಾಗಿದೆ. ಫ್ಯಾಷನ್‌ ಹೆಸರಿನಲ್ಲಿ ಕೆಲವರು ತೊಡುವುದಿಲ್ಲ. ಆದರೆ ಮುಖೇಶ್ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ವೆಸ್ಟರ್ನ್ ಡ್ರೆಸ್ ಧರಿಸಿದ್ರು  ಕೂಡಾ ಕೊರಳಿನಲ್ಲಿ ಮಂಗಳಸೂತ್ರ ಧರಿಸಿ ಪ್ಯಾರಿಸ್‌ನಲ್ಲಿ ಸುತ್ತಾಡಿದ್ದಾರೆ.

ನವವಿವಾಹಿತರಾದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಂಪತಿ ತಮ್ಮ ಕುಟುಂಬದ ಜೊತೆ ಇಂಡಿಯಾ ಹೌಸ್‍ಗೆ ಹೋಗಿದ್ದಾರೆ. ಅವರ ವಿಡಿಯೊಗಳು ಮತ್ತು ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ರಾಧಿಕಾ ಕಿತ್ತಳೆ ಬಣ್ಣದ ವೆಸ್ಟರ್ನ್ ಡ್ರೆಸ್ ಧರಿಸಿದ್ದರೆ, ಅನಂತ್  ಶರ್ಟ್‍ನ್ನು ಧರಿಸಿದ್ದರು. 

ಪ್ಯಾರಿಸ್‍ನಲ್ಲಿ ಫ್ಯಾಶನ್‍ಗಾಗಿ ರಾಧಿಕಾ ವೆಸ್ಟರ್ನ್ ಡ್ರೆಸ್ ಧರಿಸಿದ್ದರೂ ಕೂಡ ಭಾರತದ ಸಂಸ್ಕೃತಿಯನ್ನು ಮರೆಯಲಿಲ್ಲ. ಅವರು ತಮ್ಮ ಕೊರಳಿನಲ್ಲಿ ಮಂಗಳಸೂತ್ರವನ್ನು ಧರಿಸಿದ್ದರು. ಇದನ್ನು ಕಂಡು ಹಲವರು ರಾಧಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಿಲಯನ್ಸ್ ಫೌಂಡೇಶನ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಡಿಯಲ್ಲಿ ಬರುವ ಇಂಡಿಯಾ ಹೌಸ್‍ಗೆ ಐಒಸಿ ಸದಸ್ಯೆಯಾದ  ನೀತಾ ಅಂಬಾನಿ. 2024ರ ಪ್ಯಾರಿಸ್ ಒಲಿಂಪಿಕ್ಸ್ ವೀಕ್ಷಿಸಲು ಇಂಡಿಯಾ ಹೌಸ್‍ಗೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net