ನವದೆಹಲಿ: ಏಲಿಯನ್ಗಳು ಭೂಮಿಗೆ ಬರುತ್ತಿರುವ ಬಗ್ಗೆ ಈಗಾಗಲೇ ಹಲವು ಕಥೆಗಳು ಹರಿದಾಡಿವೆ. ಈ ವಿಷಯವನ್ನು ಆಧರಿಸಿ ಹಲವು ಸಿನಿಮಾಗಳೂ ಬಂದಿವೆ. ಆದರೆ ಇವುಗಳಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎಂಬುದಕ್ಕೆ ಈವರೆಗೂ ಸ್ಪಷ್ಟತೆ ಬಂದಿಲ್ಲ. ಆದರೆ ತಮಿಳುನಾಡಿನಲ್ಲೊಬ್ಬ ಒಬ್ಬ ವ್ಯಕ್ತಿ ಅನ್ಯಗ್ರಹ ಜೀವಿಗಳಿಗಾಗಿ ದೇವಾಲಯವನ್ನು ನಿರ್ಮಾಣ ಮಾಡಿದ್ದಾನೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಮಲ್ಲಮೂಪ್ಪನ್ ಪಟ್ಟಿ ಬಳಿಯ ರಾಮಗೌಂಡನೂರಿನ ಲೋಗನಾಥನ್ ಎಂಬ ವ್ಯಕ್ತಿ ಇತ್ತೀಚೆಗಷ್ಟೇ ಶಿವನ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಶಿವಲಿಂಗದ ಜೊತೆಗೆ ಒಂದು ಮಂಟಪದಲ್ಲಿ ಅಗಸ್ತ್ಯ ಮಹರ್ಷಿಗಳ ವಿಗ್ರಹಗಳನ್ನು ಮತ್ತು ಇನ್ನೊಂದು ಮಂಟಪದಲ್ಲಿ ಅನ್ಯಲೋಕದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ದೇವರುಗಳ ಜೊತೆಗೆ, ಲೋಗನಾಥನ್ ಅನ್ಯಲೋಕದ ವಿಗ್ರಹವನ್ನು ಪೂಜಿಸುತ್ತಾರೆ. 2021 ರಲ್ಲಿ ಪ್ರಾರಂಭವಾದ ಈ ದೇವಾಲಯದ ನಿರ್ಮಾಣವು ಇತ್ತೀಚೆಗೆ ಪೂರ್ಣಗೊಂಡಿದೆ. ದೇವಸ್ಥಾನದಲ್ಲಿ ಅನ್ಯಗ್ರಹ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಪ್ರಪಂಚದಲ್ಲಿ ಸಂಭವಿಸುವ ಪ್ರಕೃತಿ ವಿಕೋಪಗಳನ್ನು ತಡೆಯುವ ಶಕ್ತಿ ಏಲಿಯನ್ ಗಳಿಗೆ ಇದೆ ಎಂಬ ನಂಬಿಕೆ ಇದೆ. ಅನ್ಯಗ್ರಹದ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿರುವುದು ವಿಶ್ವದಲ್ಲೇ ಇದೇ ಮೊದಲು. ಆದರೆ ಗ್ರಾಮಸ್ಥರೊಂದಿಗೆ ಮಾತನಾಡಿ ಅನುಮತಿ ಪಡೆದು ದೇವಸ್ಥಾನ ನಿರ್ಮಿಸಲಾಗಿದೆ ಎಂದು ಲೋಗನಾಥನ್ ಹೇಳಿದ್ದಾರೆ.