

ಬೆಂಗಳೂರು: ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಸತತ ನಾಲ್ಕು ಗಂಟೆ ಕಾಲ ಸಿಸಿಬಿ ವಿಚಾರಣೆ ಎದುರಿಸಿ ಹೊರ ಬಂದಿದ್ದಾರೆ.
ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಬಂಧಿತನಾಗಿರುವ ಯುವರಾಜ್ ಅಲಿಯಾಸ್ ಸ್ವಾಮಿ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳಿಬಂದಿದೆ. ಯುವರಾಜ್ನಿಂದ ರಾಧಿಕಾಗೆ 1.25 ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ವಿಚಾರಣೆಗೆ ಬರುವಂತೆ ಡಾಲರ್ಸ್ ಕಾಲನಿಯಲ್ಲಿರೋ ರಾಧಿಕಾ ಕುಮಾರಸ್ವಾಮಿ ಮನೆಗೆ ಸಿಸಿಬಿ ಅಧಿಕಾರಿಗಳು ಗುರುವಾರ ನೋಟಿಸ್ ಕೊಟ್ಟಿಟ್ಟರು. ಇದನ್ನೂ ಓದಿರಿ ರಾಧಿಕಾಗೆ ನುಂಗಲಾರದ ತುತ್ತಾದ 3 ವಿಷಯಗಳಿವು: ಈ ಆಯಾಮದಲ್ಲೇ ನಡೆಯುತ್ತಿದೆ ಸಿಸಿಬಿ ವಿಚಾರಣೆ!?
ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 11ಕ್ಕೆ ತನ್ನ ಅಣ್ಣನ ಜತೆ ಸಿಸಿಬಿ ಕಚೇರಿಗೆ ಹಾಜರ್ ಆದ ರಾಧಿಕಾ ಕುಮಾರಸ್ವಾಮಿ, ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ವಿಚಾರಣೆ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಧಿಕಾ, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೀನಿ. ಮತ್ತೆ ವಿಚಾರಣೆಗೆ ಕರೆದರು ಬರುವೆ ಎಂದರು.