ನೇಹಾ ಕೊಲೆಗಾರರಿಗೆ ಕಠಿಣ ಶಿಕ್ಷೆ ನೀಡುವಂತೆ ರಾಧಾ ಕೊಲ್ಲಿ ಆಗ್ರಹ

Radha
Published on

ಬೆಂಗಳೂರು: ನೇಹಾ ಹಿರೇಮಠ ಕೊಲೆಗಾರನಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಭಾರತೀಯ ಮಹಿಳಾ ಘಟಕದ ಅಧ್ಯಕ್ಷೆ ರಾಧಾ ಕೊಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಕನ್ನಡ ನಾಡು ಶಾಂತಿ, ಸೌಹಾರ್ದತೆ, ಭಾವೈಕ್ಯತೆಯನ್ನು ಸಾರುವ ನಾಡು. ಇಂತಹ ನಾಡಲ್ಲಿ ನೇಹಾ ಎಂಬ ವಿದ್ಯಾರ್ಥಿಯನಿಯನ್ನು ಹಾಡುಹಗಲೇ, ನೂರಾರು ಜನಗಳ ಮಧ್ಯೆ, ಕಾಲೇಜು ಆವರಣದಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವುದು ಪೈಶಾಚಿಕ ಕೃತ್ಯ. ಕೊಲೆಗೈದಿರುವ ಫಯಾಜ್ ಎಂಬ ಯುವಕನನ್ನು ಗಲ್ಲಿಗೇರಿಸಬೇಕು. ಕಾರಣ ಸಮಾಜದಲ್ಲಿ ಜನರಲ್ಲಿ ಭಯ ಭಕ್ತಿ ಪ್ರೀತಿ ಜಾಗೃತಿ ಇಲ್ಲದಂತಾಗಿದೆ. ಮನುಷ್ಯತ್ವ ಮಾನವೀಯತೆ ಅನ್ನೋದೇ ಮರೆತು ಹೋಗಿದ್ದಾರೆ. ಅಮಾಯಕ ಯುವತಿಯರ ಪ್ರಾಣದ ಜೊತೆ ಆಟವಾಡುವವರ ವಿರುದ್ಧವಾಗಿ ಕಾನೂನು ರೀತಿಯಲ್ಲಿ ಉಗ್ರ ಕ್ರಮವನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಂತಹ ಅಹಿತಕರ ಘಟನೆಗಳು ಮತ್ತೆ ನಡೆಯದ ಹಾಗೆ ಎಚ್ಚರಿಕೆ ವಹಿಸಬೇಕು. ಯುವಕರಿಗೆ ಶಾಲಾ ಕಾಲೇಜುಗಳಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುವಂತೆ ನೀತಿ ಪಾಠ ಬೋಧಿಸಬೇಕು ಹಾಗೂ ಪೋಷಕರು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ನೇಹಾ ಹಿರೇಮಠರವರ ಆತ್ಮಕ್ಕೆ ಶಾಂತಿ ದೊರೆಯಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net