

ಬೀರೂರು: ಹೂವಿನಹಳ್ಳಿಯಲ್ಲಿ ಶ್ರೀ ರಾಚೋಟಿ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ಏ.23ರಂದು ಅದ್ದೂರಿಯಾಗಿ ನಡೆಯಲಿದೆ. 22ರ ಸಂಜೆ 5ಕ್ಕೆ ಶ್ರೀ ವೀರಭದ್ರಸ್ವಾಮಿ ಹಾಗೂ ಭದ್ರಕಾಳಿ ದೇವಿಯ ಕಲ್ಯಾಣ ಮಹೋತ್ಸವ, ಸಂಜೆ ಬಳ್ಳಿಗನೂರಿನಲ್ಲಿ ಪಲ್ಲಕ್ಕಿ ಉತ್ಸವ ಸೇವೆ ನಡೆಯಲಿದೆ. ಎಡೆಯೂರಿನ ಶಿಲಾಮಠ ಮತ್ತು ಬಾಳೆಹೊನ್ನೂರು ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಏ.24ರವರೆಗೆ ಪ್ರತಿದಿನ ವಿವಿಧ ಶಾಸಗಳು, ಉತ್ಸವ ಹಾಗೂ ದುಗ್ಗಲ ಸೇವೆ ನಡೆಯಲಿದೆ.