ನಾನು ಆ ರೀತಿ ಅಲ್ಲ! ಕರ್ಮ ಯಾರನ್ನೂ ಬಿಡೋದಿಲ್ಲ: ಬ್ರೇಕಪ್​ ಕಹಾನಿ ಬಿಚ್ಚಿಟ್ಟ ಹಾಟ್​ಬ್ಯೂಟಿ ರಾಶಿ ಖನ್ನಾ | Raashi Khanna

ವಿಜಯವಾಣಿ (20)
Published on

Raashi Khanna: ನಟ ಸಿದ್ದು ಜೊನ್ನಲಗಡ್ಡ, ರಾಶಿ ಖನ್ನಾ ಮತ್ತು ಶ್ರೀನಿಧಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರೊಮ್ಯಾಂಟಿಕ್ ಎಂಟರ್‌ಟೈನರ್ 'ತೆಲುಸು ಕದ' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳಲ್ಲಿ ಸಖತ್ ಬಿಜಿಯಾಗಿದೆ.

ನೀರಜ್ ಕೋನಾ ನಿರ್ದೇಶನದ ಈ ಚಿತ್ರವು ಅ.17ರಂದು ತೆರೆಗೆ ಬರಲು ಸಜ್ಜಾಗಿದೆ. ಇನ್ನು ಸಿನಿಮಾ ಪ್ರಚಾರದ ವೇಳೆ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡ ನಾಯಕಿ ರಾಶಿ ಖನ್ನಾ, ತಮ್ಮ ಜೀವನದಲ್ಲಿ ಉಂಟಾದ ಲವ್​ ಬ್ರೇಕಪ್​ ಕುರಿತು ಬಾಯ್ಬಿಟ್ಟರು. ಲೈಫ್​ನಲ್ಲಿ ಎರಡು ಬಾರಿ ಪ್ರೀತಿಯಲ್ಲಿ ಬಿದ್ದೆ. ನಾನು ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮುನ್ನ ಮತ್ತು ನಂತರ ಪ್ರೀತಿ ಸಂಬಂಧದಲ್ಲಿ ತೊಡಗಿದ್ದೆ ಎಂದು ಹೇಳಿದ್ದಾರೆ.

"ನನ್ನ ಮಾಜಿ ಪ್ರಿಯಕರನ ಜೊತೆ ಬ್ರೇಕಪ್ ಮಾಡಿಕೊಂಡಾಗ, ಅವನ ಮೇಲೆ ಸೇಡು ತೀರಿಸಿಕೊಳ್ಳುವಂತೆ ನನ್ನ ಸ್ನೇಹಿತರೆಲ್ಲರೂ ಒತ್ತಾಯಿಸಿದರು. ಆದರೆ, ನಾನು ಅದಕ್ಕೆ ಒಪ್ಪಲಿಲ್ಲ. ಕಾರಣ, ನಾನು ಆ ರೀತಿಯ ಹುಡುಗಿಯಲ್ಲ. ನನಗೆ ಬೇಡವಾದ ವ್ಯಕ್ತಿಯಿಂದ ದೂರವಿರಬಹುದು ಅಂದಮೇಲೆ ಅವರಿಗೆ ಕೆಟ್ಟದ್ದಾಗಲಿ ಎಂದು ಬಯಸುವುದು ಸರಿಯಲ್ಲ. ಇಲ್ಲಿ ಕರ್ಮ ಯಾರನ್ನೂ ಬಿಡುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಇನ್ನೊಬ್ಬರಿಗೆ ಕೇಡು ಬಗೆಯುವ ಮನಸ್ಥಿತಿಯೂ ನನ್ನದಲ್ಲ" ಎಂದು ಹೇಳಿದರು.

ನಟ ಸಿದ್ದು ಜೊನ್ನಲಗಡ್ಡ, ರಾಶಿ ಖನ್ನಾ ಮತ್ತು ಶ್ರೀನಿಧಿ ಶೆಟ್ಟಿ ನಟಿಸಿರುವ ಈ ತ್ರಿಕೋನ ಪ್ರೇಮಕಥೆಯನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿಜಿ ವಿಶ್ವಪ್ರಸಾದ್ ನಿರ್ಮಿಸಿದ್ದು, ಚಿತ್ರಕ್ಕೆ ಥಮನ್ ಸಂಗೀತ ನೀಡಿದ್ದಾರೆ. ಸಿನಿಮಾ ದೀಪಾವಳಿ ಹಬ್ಬಕ್ಕೂ ಮೊದಲೇ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net