ವರದಕ್ಷಿಣೆಯಾಗಿ ಕಾರು ಕೊಡ್ಲಿಲ್ಲ ಅಂತಾ ಕ್ರಿಕೆಟ್​ ಬ್ಯಾಟ್​ನಿಂದ ಪತ್ನಿ ಕೊಂದು ಹೈಡ್ರಾಮ ಆಡಿದ ಪತಿ ಅರೆಸ್ಟ್​!

TN Girl
Published on

ಸೇಲಂ: ವರದಕ್ಷಿಣೆಯಾಗಿ ಕಾರು ಕೊಡಲಿಲ್ಲ ಅಂತಾ ಕ್ರಿಕೆಟ್​ ಬ್ಯಾಟ್​ನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದ ಪಾಪಿ ಪತಿಯನ್ನು ತಮಿಳುನಾಡು ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.

ಬಂಧಿತ ಆರೋಪಿಯನ್ನು ಕೀರ್ತಿರಾಜ್​ (31) ಎಂದು ಗುರುತಿಸಲಾಗಿದೆ. ಸೇಲಂನ ಮುಲ್ಲೈ ನಗರದ ನಿವಾಸಿ ಧನಶ್ರಿಯಾ (26) ಕೊಲೆಯಾದ ದುರ್ದೈವಿ. ಮೂರು ವರ್ಷಗಳ ಹಿಂದೆ ಇಬ್ಬರಿಗೆ ಮದುವೆಯಾಗಿತ್ತು. ದಂಪತಿ ಕೆಲ ದಿನಗಳ ಹಿಂದಷ್ಟೇ ಸ್ವಂತ ಮನೆಯಿಂದ ಬಾಡಿಗೆ ಮನೆಗೆ ತೆರಳಿದ್ದರು. ಇದಾದ ಬಳಿಕ ಧನಶ್ರಿಯಾಗೆ ಗಂಡನಿಂದ ವರದಕ್ಷಿಣೆ ಕಿರುಕುಳ ಆರಂಭವಾಗಿತ್ತು. ಅತಿ ಹೆಚ್ಚು ಚಿನ್ನಾಭರಣ ಮತ್ತು ಕಾರಿಗಾಗಿ ಕೀರ್ತಿರಾಜ್​ ಬೇಡಿಕೆ ಇಟ್ಟಿದ್ದ.

ಇನ್ನು ಹೆಚ್ಚಿನ ವರದಕ್ಷಿಣೆ ಕೊಡಲು ಆಗುವುದಿಲ್ಲ ಎಂದು ಧನಶ್ರಿಯಾ ಕುಟುಂಬದವರು ಹೇಳಿದ್ದರು. ಈ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಆದರೀಗ ಜಗಳ ತಾರಕಕ್ಕೇರಿ, ನಿಯಂತ್ರಣ ಕಳೆದುಕೊಂಡ ಕೀರ್ತಿರಾಜ್​, ಕ್ರಿಕೆಟ್​ ಬ್ಯಾಟ್​ನಿಂದ ಪತ್ನಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕೊಲೆಯಾದ ಬಳಿಕ ಪತ್ನಿಯ ಮೃತದೇಹವನ್ನು ನೇತುಹಾಕಿ ಆತ್ಮಹತ್ಯೆ ಅಂತಾ ಬಿಂಬಿಸಲು ಯತ್ನಿಸಿದ್ದಾನೆ.

ಪತ್ನಿಯ ಮೃತದೇಹ ನೇತುಹಾಕಿ ತನ್ನ ಅತ್ತೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಸುಳ್ಳು ಹೇಳಿದ್ದಾನೆ. ಆದರೆ, ಧನಶ್ರಿಯಾ ತಲೆ ಮತ್ತು ಮುಖದಲ್ಲದ್ದ ಗಾಯದ ಗುರುತಗಳನ್ನು ನೋಡಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಆರೋಪಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆರೋಪಿ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆತನನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net