ಆರ್​ಜಿವಿ ಜತೆ ಸೆಕ್ಸ್​ ಟಾಕ್​! ನೆಟ್ಟಿಗರ ಪ್ರಶ್ನೆಗೆ ಶಾಕಿಂಗ್​ ಉತ್ತರ ನೀಡಿದ ಅರಿಯಾನಾ

RGV
Published on

ಹೈದರಾಬಾದ್​: ಬಾಲಿವುಡ್​ ನಿರ್ದೇಶಕ ರಾಮ್​​ಗೋಪಾಲ್​ ವರ್ಮ ಜತೆ ಬಿಗ್​ಬಾಸ್​ ಬ್ಯೂಟಿ ಅರಿಯಾನಾ ಗ್ಲೋರಿ, ದೇಹದ ಅಂಗಾಂಗ, ಸೆಕ್ಸ್​, ರೊಮ್ಯಾನ್ಸ್​, ಸಂಬಂಧ (ಅಫೇರ್​) ಮುಂತಾದ ವಿಚಾರಗಳ ಬಗ್ಗೆ ಮುಕ್ತಾವಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ, ಟ್ರೋಲಿಗರಿಗೆ ಆರ್​​ಜಿವಿ ಮತ್ತು ಅರಿಯಾನಾ ಹಾಟ್​ ಸಂದರ್ಶನವು ಆಹಾರವಾಗಿದ್ದು, ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಅರಿಯಾನಾ ಹುಬ್ಬೇರಿಸುವ ಉತ್ತರ ನೀಡಿದ್ದಾರೆ.

ಆರ್​ಜಿವಿ ಜತೆಗಿನ ಸಂದರ್ಶನ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ನೀವು ಇಷ್ಟೊಂದು ಬೋಲ್ಡ್​ ಏಕೆ ಎಂದು ನೆಟ್ಟಿಗರು ಪ್ರಶ್ನಿಸಿದರೆ, ಅದರಲ್ಲಿ ಬೋಲ್ಡ್​ ಅನ್ನುವಂಥದ್ದು ಏನಿದೆ ಎನ್ನುವ ಮೂಲಕ ಅರಿಯಾನಾ ಹುಬ್ಬೇರಿಸಿದ್ದಾರೆ.

ಒಂದು ವೇಳೆ ಆರ್​ಜಿವಿ ಯುವತಿಯರಿಗೆ ಕಿರುಕುಳ ನೀಡುವುದಿದ್ದರೆ, ಅವರ ಹೆಸರು ಇಷ್ಟೊತ್ತಿಗಾಗಲೇ ಮೀಟೂ ಆರೋಪದಲ್ಲಿ ಕೇಳಿಬರುತ್ತಿತ್ತು. ಯಾರಾದರೂ ಆರೋಪ ಮಾಡಿದ್ದಾರೆಯೇ ಎಂದು ಅರಿಯಾನಾ ಆರ್​ಜಿವಿ ಓರ್ವ ಒಳ್ಳೆಯ ವ್ಯಕ್ತಿ ಎಂದು ಸಮರ್ಥಿಸಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಬದುಕಲು ಅಥವಾ ದಶಕಗಳ ಕಾಲ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದರೆ ಕೆಲವೊಮ್ಮೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ರಾಜಿ ಮಾಡಿಕೊಳ್ಳುವುದರಲ್ಲಿ ತಪ್ಪೇನಿದೆ ಎನ್ನುವ ಮೂಲಕ ನೆಟ್ಟಿಗರಿಗೆ ತಿರುಗೇಟು ನೀಡಿದ್ದಾರೆ. ಹೀಗಾಗಿ ವರ್ಮಾ ಮತ್ತು ಅರಿಯಾನಾ ನಡುವೆ ಏನೋ ಒಪ್ಪಂದ ಇದೆ ಎಂಬ ಮಾತುಗಳು ಕಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿದೆ.

ಜಿಮ್​ ಮಾಡುತ್ತಾ ಒಬ್ಬರಿಗೊಬ್ಬರು ಬೋಲ್ಡ್​ ಮಾತುಗಳನ್ನಾಡಿರುವ ಸಂದರ್ಶನದ ವಿಡಿಯೋ ಯೂಟ್ಯೂಬ್​ನಲ್ಲಿ ವೈರಲ್​ ಆಗಿದೆ. ಇತ್ತೀಚೆಗಷ್ಟೇ ಬೋಲ್ಡ್​ ಇಂಟರ್ವ್ಯೂವ್​ ವಿತ್​ ಗ್ಲೋರಿ ಟೀಸರ್​ ಅನ್ನು ಅರಿಯಾನಾ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು. ಸಂದರ್ಶನವೂ ಸಹ ವರ್ಮ ಸಿನಿಮಾ ರೀತಿಯಲ್ಲೇ ಬೋಲ್ಡ್​ ಆಗಿದೆ. ಇಡೀ ಸಂದರ್ಶನದಲ್ಲಿ ದೇಹದ ಅಂಗಾಂಗ, ಸೆಕ್ಸ್​, ರೊಮ್ಯಾನ್ಸ್​, ಸಂಬಂಧ (ಅಫೇರ್​) ಮುಂತಾದ ವಿಚಾರಗಳ ಬಗ್ಗೆಯೇ ಇಬ್ಬರು ಮುಕ್ತವಾಗಿ ಚರ್ಚಿಸಿದ್ದಾರೆ. ಅಂದಹಾಗೆ ಈ ಸಂದರ್ಶನ ವರ್ಮ ಅವರು ಆಫೀಸ್​ನಲ್ಲೇ ನಡೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net