

ನವದೆಹಲಿ: ಟೆಸ್ಲಾ ಕಂಪನಿಯ ಸಿಇಒ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು 27 ವರ್ಷದ ಆಸ್ಟ್ರೇಲಿಯಾ ಮೂಲದ ನಟಿ ನತಾಶಾ ಬಾಸ್ಸೆಟ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಎಲಾನ್ ಮಸ್ಕ್ ಅವರು ಕೆಲವೇ ತಿಂಗಳುಗಳ ಹಿಂದೆ ತಮ್ಮ ಗರ್ಲ್ಫ್ರೆಂಡ್ ಕೆನಡಾ ಮೂಲದ ಗಾಯಕಿ ಗ್ರಿಮ್ಸ್ನಿಂದ ಬ್ರೇಕಪ್ ಮಾಡಿಕೊಂಡಿದ್ದಾರೆ. ಇದೀಗ ನತಾಶಾ ಜತೆ ಡೇಟಿಂಗ್ ಮಾಡುತ್ತಿರುವುದಾಗಿ ವರದಿಯಾಗಿದೆ. ಫೆ. 17ರಂದು ಇಬ್ಬರು ಜತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈ ಸುದ್ದಿ ಹರಿದಾಡುತ್ತಿದೆ.
ಕೆಲವು ದಿನಗಳಿಂದ ಇಬ್ಬರು ಒಬ್ಬರನೊಬ್ಬರನ್ನು ನೋಡುತ್ತಿದ್ದರು ಎಂದು ಹೇಳಲಾಗಿದೆ. ಆರಂಭದಲ್ಲಿ ಫ್ರೆಂಡ್ಸ್ ಆಗಿದ್ದ ಇಬ್ಬರು, ಗ್ರಿಮ್ಸ್ ಜತೆ ಎಲಾನ್ ಮಸ್ಕ್ ಬ್ರೇಕಪ್ ಮಾಡಿಕೊಂಡ ಬೆನ್ನಲ್ಲೇ ತಮ್ಮ ಸಂಬಂಧವನ್ನು ರೊಮ್ಯಾಂಟಿಕ್ಗೆ ಬದಲಿಸಿದ್ದಾರೆ. ನಟಿ ನತಾಶಾ ಮುಂಬರುವ ಅಮೆರಿಕನ್ ಗಾಯಕ ಮತ್ತು ನಟ ಎಲ್ವಿಸ್ ಪ್ರಿಸ್ಲಿಯ ಜೀವನ ಆಧಾರಿತ ಚಿತ್ರದಲ್ಲಿ ಎಲ್ವಿಸ್ ಪ್ರೀಸ್ಲಿಯ ಮೊದಲ ಗೆಳತಿ ಡಿಕ್ಸಿ ಲಾಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಂದಹಾಗೆ ಎಲಾನ್ ಮಸ್ಕ್ ಅವರು 2021ರ ಸೆಪ್ಟೆಂಬರ್ನಲ್ಲಿ ಕೆನಡಿಯನ್ ಸಿಂಗರ್ ಗ್ರಿಮ್ಸ್ ಜತೆ ಬ್ರೇಕಪ್ ಮಾಡಿಕೊಂಡರು. ಇಬ್ಬರಿಗೆ X AE A-Xii ಹೆಸರಿನ ಒಂದು ವರ್ಷದ ಓರ್ವ ಪುತ್ರನಿದ್ದಾನೆ. ಇನ್ನು ಮೊದಲ ಪತ್ನಿ ಲೇಖಕಿ ಜಸ್ಟಿನ್ ಮಸ್ಕ್ ಜತೆ 2008ರಲ್ಲೇ ಡಿವೋರ್ಸ್ ಮಾಡಿಕೊಂಡಿದ್ದು, ಇವರಿಗೆ ಐವರು ಗಂಡು ಮಕ್ಕಳಿದ್ದಾರೆ. ಇದಲ್ಲದೆ, ಬ್ರಿಟಿಷ್ ನಟಿ ತಲುಲಾಹ್ ರಿಲೆ ಜತೆ ಎರಡು ಬಾರಿ ಎಲಾನ್ ಮಸ್ಕ್ ವಿವಾಹವಾಗಿದ್ದರು. (ಏಜೆನ್ಸೀಸ್)