ಡಿಎಂಕೆ ಪ್ರಚಂಡ ಜಯಭೇರಿ: ಕೊಟ್ಟ ಮಾತಿನಂತೆ ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದ ಮಹಿಳೆ!

DMK
Published on

ಚೆನ್ನೈ: ಕೊಟ್ಟ ಮಾತಿನಂತೆ ಮಹಿಳೆಯೊಬ್ಬಳು ತನ್ನ ನಾಲಿಗೆಯನ್ನು ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಗೆಲುವು ಸಾಧಿಸಿದರೆ, ತನ್ನ ನಾಲಿಗೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸುವುದಾಗಿ ಈ ಮುಂಚೆಯೇ 32 ವರ್ಷದ ವನಿತಾ ಎಂಬಾಕೆ ಮಾತು ಕೊಟ್ಟಿದ್ದಳು.

ನಿನ್ನೆ ನಡೆದ ಮತಎಣಿಕೆಯಲ್ಲಿ ಡಿಎಂಕೆ 159 ಸ್ಥಾನಗಳ ಪ್ರಚಂಡ ಬಹುಮತದೊಂದಿಗೆ ಈ ಬಾರಿಯ ತಮಿಳುನಾಡು ಗದ್ದುಗೆಯನ್ನು ಏರಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮುಥಾಳಮ್ಮನ್​ ದೇವಸ್ಥಾನಕ್ಕೆ ತೆರಳಿದ ಮಹಿಳೆ ಪೂಜೆ ನೇರವೇರಿಸಿ ತನ್ನ ನಾಲಿಗೆಯನ್ನು ಕತ್ತಿರಿಸಿಕೊಂಡು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾಳೆ.

ಕರೊನಾ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಯಾವುದೇ ಪೂಜೆ-ಪುನಸ್ಕಾರ ನಡೆಯದಿದ್ದರಿಂದ ದೇವಸ್ಥಾನದ ಗೇಟ್​ ಮುಂದೆಯೇ ಪೂಜೆ ಸಲ್ಲಿಸಿ ಚಾಕುವಿನಿಂದ ನಾಲಿಗೆ ಕುಯ್ದುಕೊಂಡ ತಕ್ಷಣವೇ ಕುಸಿದು ಬಿದ್ದಿದ್ದಾಳೆ. ಬಳಿಕ ಸ್ಥಳೀಯರು ಗಮನಿಸಿ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹತ್ತು ವರ್ಷಗಳ ಕಾಲ ಪ್ರತಿಪಕ್ಷದ ಸ್ಥಾನದಲ್ಲಿದ್ದ ಡಿಎಂಕೆ ಎದುರಾಳಿ ಎಐಎಡಿಎಂಕೆ ವಿರುದ್ಧ ಪ್ರಚಂಡ ಜಯಭೇರಿ ಬಾರಿಸಿದೆ. ಇದೀಗ ಆಡಳಿತಾರೂಡ ಎಐಎಡಿಎಂಕೆ ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 234 ವಿಧಾನಸಭಾ ಸ್ಥಾನಗಳಲ್ಲಿ 159 ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಎಂಕೆ ಅಧಿಕಾರ ಹಿಡಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net