ನವೆಂಬರ್​ 1ರಿಂದ ಈ ಮೊಬೈಲ್​ಗಳಲ್ಲಿ ವಾಟ್ಸ್​ಆ್ಯಪ್ ಸ್ಥಗಿತ: ಸಂಪೂರ್ಣ ಪಟ್ಟಿ ಇಲ್ಲಿದೆ

Whatsapp
Published on

ನವದೆಹಲಿ: ಫೇಸ್​ಬುಕ್​ ಒಡೆತನದ ಪ್ರಖ್ಯಾತ ಮೆಸೆಂಜಿಂಗ್ ಆ್ಯಪ್​ ಆಗಿರುವ ವಾಟ್ಸ್​ಆ್ಯಪ್​, ನವೆಂಬರ್​ 1ರಿಂದ ಅನೇಕ ಸ್ಮಾರ್ಟ್​ಫೋನ್​ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದೆ.

Android ಮತ್ತು iOS​ ಹಳೆಯ ವರ್ಷನ್​ಗಳನ್ನು ನಾಳೆಯಿಂದ ಆ್ಯಪ್​ ಬೆಂಬಲಿಸುವುದಿಲ್ಲ. Android OS 4.1 ಮತ್ತು ಅದಕ್ಕಿಂತಲೂ ಹೆಚ್ಚು ಹಾಗೂ iOS 10 ಮತ್ತು ಅದಕ್ಕಿಂತಲೂ ಹೆಚ್ಚಿನ ವರ್ಷನಗಳಲ್ಲಿ ಮಾತ್ರ ವಾಟ್ಸ್​ಆ್ಯಪ್​ ಬಳಕೆಯಾಗಲಿದೆ.

ಎಲ್ಲಾ Android ಮತ್ತು iOS ಬಳಕೆದಾರರು ತಮ್ಮ ಮೊಬೈಲ್ ಫೋನ್​ನ ಸೆಟ್ಟಿಂಗ್‌ಗಳನ್ನು ಪ್ರವೇಶಿಸುವ ಮೂಲಕ ತಾವು ಬಳಸುತ್ತಿರುವ ಸಾಫ್ಟ್‌ವೇರ್‌ನ ಆವೃತ್ತಿಯನ್ನು ಸಹ ಪರಿಶೀಲಿಸಬಹುದು. ಹಳೆಯ ಸ್ಮಾರ್ಟ್‌ಫೋನ್‌ಗಳು ವಾಟ್ಸ್​ಆ್ಯಪ್​ ಅಪ್ಲಿಕೇಶನ್ ಅನ್ನು ಚಲಾಯಿಸಲು ಅರ್ಹತೆ ಪಡೆಯುವುದನ್ನು ನಿಲ್ಲಿಸುತ್ತವೆ.

ನವೆಂಬರ್ 1ರಿಂದ ವಾಟ್ಸ್​ಆ್ಯಪ್​ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಸ್ಮಾರ್ಟ್‌ಫೋನ್‌ಗಳ ಸಂಪೂರ್ಣ ಪಟ್ಟಿ ಇಲ್ಲಿದೆ...

ಆ್ಯಪಲ್​: ಐಫೋನ್​ 6ಎಸ್​ (iPhone 6S), ಐಫೋನ್​ 6ಎಸ್​ ಪ್ಲಸ್​ (iPhone 6S Plus ) ಮತ್ತು ಆ್ಯಪಲ್​ ಐಫೋನ್​ ಎಸ್​​ಇ (Apple iPhone SE)

ಸ್ಯಾಮ್ಸಂಗ್​: ಸ್ಯಾಮ್ಸಂಗ್ ಗ್ಯಾಲಕ್ಷಿ ಟ್ರೆಂಡ್​ ಲೈಟ್ (Samsung Galaxy Trend Lite )​, ಗ್ಯಾಲಕ್ಷಿ ಎಸ್​II (Galaxy SII), ಗ್ಯಾಲಕ್ಷಿ ಟ್ರೆಂಡ್​ II (Galaxy Trend II), ಗ್ಯಾಲಕ್ಷಿ ಎಸ್​3 ಮಿನಿ (Galaxy S3 mini), ಗ್ಯಾಲಕ್ರಿ ಕೋರ್ (Galaxy Core )​, ಗ್ಯಾಲಕ್ಷಿ ಎಕ್ಷ್​ಕವರ್​ 2(Galaxy Xcover 2), ಗ್ಯಾಲಕ್ಷಿ ಏಸ್​ 2 (Galaxy Ace 2).

ಎಲ್​ಜಿ: ಎಲ್​ಜಿ ಲುಸಿಡ್​ 2 (LG Lucid 2), ಆಪ್ಟಿಮಸ್​ ಎಲ್​5 ಡ್ಯುಯಲ್​ (Optimus L5 Dual), ಆ್ಪಟಿಮಸ್​ ಎಲ್​4 II ಡ್ಯುಯೆಲ್​ (Optimus L4 II Dual), ಆಪ್ಟಿಮಸ್​ ಎಫ್​3ಕ್ಯೂ (Optimus F3Q), ಆಪ್ಟಿಮಸ್​ ಎಫ್​7 (Optimus F7), ಆಪ್ಟಿಮಸ್​ ಎಫ್​5 (Optimus F5), ಆಪ್ಟಿಮಸ್​ ಎಲ್​3 II ಡ್ಯುಯೆಲ್​ (Optimus L3 II Dual), ಆಪ್ಟಿಮಸ್​ ಎಫ್​5 (Optimus F5 ), ಆಪ್ಟಿಮಸ್​ ಎಲ್​5 (Optimus L5), ಆಪ್ಟಿಮಸ್​ ಎಲ್​5 II (Optimus L5 II ), ಆಪ್ಟಿಮಸ್​ ಎಲ್​3 II (Optimus L3 II), ಆಪ್ಟಿಮಸ್​ ಎಲ್​7 (Optimus L7), ಆಪ್ಟಿಮಸ್​ ಎಲ್​7 II ಡ್ಯುಯೆಲ್​ (Optimus L7 II Dual), ಆಪ್ಟಿಮಸ್​ ಎಲ್​7 II (Optimus L7 II), ಆಪ್ಟಿಮಸ್​ ಎಫ್​6 (Optimus F6), ಎನಾಕ್ಟ್​ (Enact), ಆಪ್ಟಿಮಸ್​ ಎಫ್​3 (Optimus F3), ಆಪ್ಟಿಮಸ್​ ಎಲ್​4 II (Optimus L4 II), ಆಪ್ಟಿಮಸ್​ ಎಲ್​2 II (Optimus L2 II), ಆಪ್ಟಿಮಸ್​ ನಿಟ್ರೊ ಎಚ್​ಡಿ ಮತ್ತು 4ಎಕ್ಸ್​ ಎಚ್​ಡಿ (Optimus Nitro HD and 4X HD).

ಝಡ್​ಟಿಇ: ಝಡ್​ಟಿಇ ಗ್ರ್ಯಾಂಡ್​ ಎಸ್​ ಫ್ಲೆಕ್ಸ್​ (ZTE Grand S Flex), ಗ್ರ್ಯಾಂಡ್​ ಎಕ್ಷ್​ ಕ್ವಾಡ್​ ವಿ987 (Grand X Quad V987), ಝಡ್​ಟಿಇ ವಿ956 (ZTE V956), ಗ್ರ್ಯಾಂಡ್​ ಮೆಮೊ (Grand Memo).

ಹುವಾವೈ: ಹುವಾವೈ ಅಸೆಂಡ್​ ಜಿ740 (Huawei Ascend G740 ), ಅಸೆಂಡ್​ ಡಿ ಕ್ವಾಡ್​ ಎಕ್ಷ್​ಎಲ್​ (Ascend D Quad XL ), ಅಸೆಂಡ್​ ಮೇಟ್​ (Ascend Mate), ಅಸೆಂಡ್​ ಪಿ1ಎಸ್​ (Ascend P1 S), ಅಸೆಂಡ್​ ಡಿ2 (Ascend D2), ಅಸೆಂಡ್​ ಡಿ1 ಕ್ವಾಡ್​ ಎಕ್ಷ್​ಎಲ್​ (Ascend D1 Quad XL). (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net