ಹೆಣ್ಣು ಮಕ್ಕಳ ಖಾಸಗಿ ಅಂಗ ಮೋಜಿನ ವಸ್ತುವಂತೆ! ಸ್ನೇಹಿತನೊಬ್ಬನ ಕರಾಳ ಮುಖ ಬಿಚ್ಚಿಟ್ಟ ಚಿನ್ಮಯಿ

Chinmayi
Published on

ಚೆನ್ನೈ: ಗಾಯಕಿ ಹಾಗೂ ಡಬ್ಬಿಂಗ್​ ಕಲಾವಿದೆ ಚಿನ್ಮಯಿ ಶ್ರೀಪಾದ ಅವರು ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲತೆಯ ವಿರುದ್ಧ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಸ್ತ್ರೀವಾದಿ ಎಂದೇ ಬ್ರ್ಯಾಂಡ್​ ಆಗಿರುವ ಚಿನ್ಮಯಿ ಅವರು ಇದೀಗ ಹೆಣ್ಣು ಮಕ್ಕಳನ್ನು ಕಾಮದ ವಸ್ತುವಾಗಿ ನೋಡುವವರ ವಿರುದ್ಧ ಧ್ವನಿ ಏರಿಸಿದ್ದಾರೆ.

ಇತ್ತೀಚೆಗೆ ಮಂಗಳಸೂತ್ರದ ಬಗ್ಗೆ ಮಾಡಿರುವ ಜಾಹೀರಾತು ಭಾರೀ ವಿವಾದವನ್ನು ಎಬ್ಬಿಸಿದೆ. ಕಾರಣ ಮಂಗಳಸೂತ್ರ ಜಾಹೀರಾತುವಿನಲ್ಲಿ ಹೆಣ್ಣನ್ನು ಅರೆಬೆತ್ತಲೆಯಾಗಿ ತೋರಿಸಲಾಗಿದೆ. ಮಂಗಳಸೂತ್ರ ಕೇವಲ ಒಂದು ಆಭರಣವಷ್ಟೇ ಎಂದಿರುವ ಚಿನ್ಮಯಿ, ಇದು ಮಹಿಳೆಯರಿಗೆ ಮಾತ್ರ ಏಕೆ? ಪುರುಷರು ಮದುವೆಯಾಗಿದ್ದೇನೆ ಎಂದು ತೋರಿಸಲು ಆಭರಣಗಳನ್ನು ಏಕೆ ಹಾಕಿಕೊಳ್ಳುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಸ್ನೇಹಿತೆಯ ಜತೆ ಚಿನ್ಮಯಿ ಚಾಟ್​ ಮಾಡುವಾಗ ಆಕೆಯ ಫ್ರೆಂಡ್​ ಒಬ್ಬರ ಬಗ್ಗೆ ಹೇಳಿದ್ದಾರೆ. 14ನೇ ವಯಸ್ಸಿನಲ್ಲಿ ಚಿನ್ಮಯಿ ಫ್ರೆಂಡ್​ ಓರ್ವ ಹೆಣ್ಣು ಮಕ್ಕಳ ಎದೆ ನೋಡುವ ಖಯಾಲಿ ಹೊಂದಿದ್ದನಂತೆ. ಅವುಗಳನ್ನು ಹಿಡಿಯುವುದು ಅವನಿಗೆ ಮೋಜು ಆಗಿತ್ತಂತೆ. ಜನಜಂಗುಳಿ ಪ್ರದೇಶದಲ್ಲಿ ಅಥವಾ ಒಂಟಿಯಾಗಿರುವಾಗ ಹೆಣ್ಣು ಮಕ್ಕಳ ಎದೆಯನ್ನು ಹಿಡಿಯುತ್ತಿದ್ದನಂತೆ. ಅದರಲ್ಲಿ ಆತ ಪರಿಣಿತನಾಗಿದ್ದನಂತೆ. ತನ್ನ ಬಗ್ಗೆ ತಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದನಂತೆ.

ಆ ವಯಸ್ಸಿನಲ್ಲಿ ಅದು ಆತನಿಗೆ ಫನ್​ ಆಗಿತ್ತಂತೆ ಮತ್ತು ಅವರ ಗ್ಯಾಂಗ್​ನಲ್ಲಿ ಆತ ಶ್ರೇಷ್ಠನಾಗಿದ್ದನಂತೆ. ಅನೇಕ ಹೆಣ್ಣು ಮಕ್ಕಳ ಎದೆಯನ್ನು ಹಿಡಿದಿದ್ದನಂತೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಚಿನ್ಮಯಿ ಇಂತಹ ಮಂದಿ ಈಗಲೂ ನಮ್ಮ ನಡುವೆ ಇದ್ದಾರೆ. ಅದರಲ್ಲು ಫನ್​ಗಾಗಿ ಇಂತಹ ಕೆಲಸಗಳನ್ನು ಮಾಡುತ್ತಿದ್ದಾಗಿ ಹೇಳಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು ಎಂದು ಆತನ ವಿರುದ್ಧ ಚಿನ್ಮಯಿ ಈಗ ಕಿಡಿಕಾರಿದ್ದಾರೆ. ಹೆಣ್ಣು ಮಕ್ಕಳೆಂದರೆ ಕೇವಲ ಮೋಜಿನ ಅಥವಾ ಕಾಮದ ವಸ್ತುವಲ್ಲ ಎಂದು ಹೇಳಿದ್ದಾರೆ. ಇಷ್ಟು ವಿಚಾರಗಳನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದು, ತುಂಬಾ ವೈರಲ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net