ರಷ್ಯಾದ ಮಿಲಿಟರಿ ಟ್ಯಾಂಕನ್ನೇ ಟ್ರ್ಯಾಕ್ಟರ್​ ಮೂಲಕ ಕದೊಯ್ದ ಯೂಕ್ರೇನಿಯನ್​ ರೈತ! ವಿಡಿಯೋ ವೈರಲ್

Military Tank
Published on

ಕೀಯೆವ್​/ಮಾಸ್ಕೋ: ಯೂಕ್ರೇನ್​ ಮತ್ತು ರಷ್ಯಾ ನಡುವೆ ಯುದ್ಧ ಆರಂಭವಾದಗಿನಿಂದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನಿತ್ಯವು ಹರಿದಾಡುತ್ತಿದೆ. ಇವುಗಳ ನಡುವೆ ಯೂಕ್ರೇನಿಯನ್​ ರೈತನೊಬ್ಬ ರಷ್ಯಾದ ಮಿಲಿಟರಿ ಟ್ಯಾಂಕ್​ ಅನ್ನು ಟ್ರ್ಯಾಕ್ಟರ್​ ಮೂಲಕ ಕದ್ದೊಯ್ಯುತ್ತಿರುವುದು ಎನ್ನಲಾದ ವಿಡಿಯೋವೊಂದು ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಬ್ರಿಟಿಷ್ ಕನ್ಸರ್ವೇಟಿವ್ ಪಕ್ಷದ ರಾಜಕಾರಣಿ ಮತ್ತು ಪ್ಲೈಮೌತ್ ಮೂರ್ ಕ್ಷೇತ್ರದ ಸಂಸದ ಜಾನಿ ಮೆರ್ಸರ್​ ಎಂಬುವರು ವಿಡಿಯೋವನ್ನು ಸೋಮವಾರ ಶೇರ್​ ಮಾಡಿಕೊಂಡಿದ್ದಾರೆ. ಇಲ್ಲಿ ಯಾವುದೇ ಪರಿಣಿತರು ಇಲ್ಲ ಮತ್ತು ರಷ್ಯಾ ಆಕ್ರಮಣವು ವಿಶೇಷವಾಗಿ ಉತ್ತಮವಾಗಿ ನಡೆಯುತ್ತಿರುವಂತೆ ಕಾಣುತ್ತಿಲ್ಲ. ಯೂಕ್ರೇನಿಯನ್​ ಟ್ರ್ಯಾಕ್ಟರ್​ ರಷ್ಯಾದ ಮಿಲಿಟಿರಿ ಟ್ಯಾಂಕ್​ ಕದ್ದೊಯ್ಯುತಿದೆ ಎಂದು ಮೆರ್ಸರ್​ ಬರೆದುಕೊಂಡಿದ್ದಾರೆ.

7 ಸೆಕೆಂಡ್​ನ ವಿಡಿಯೋದಲ್ಲಿ ಟ್ರ್ಯಾಕ್ಟರ್​ ಒಂದು ಮಿಲಿಟರಿ ಟ್ಯಾಂಕ್ ಅನ್ನು ಎಳೆದೊಯ್ಯುತ್ತಿರುವ ಮತ್ತು ಅದರ ಹಿಂದೆ ವ್ಯಕ್ತಿಯೊಬ್ಬ ಓಡುತ್ತಿರುವ ದೃಶ್ಯವಿದೆ. ಈಗಾಗಲೇ ಈ ವಿಡಿಯೋ 4 ಮಿಲಿಯನ್​ಗೂ​ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ರಷ್ಯಾವನ್ನು ಏಕಾಂಗಿಯಾಗಿ ಎದುರಿಸುತ್ತಿರುವ ಯೂಕ್ರೇನಿಯನ್ನರ ದಿಟ್ಟತನವನ್ನು ವಿಡಿಯೋ ನೋಡಿದ ನೆಟ್ಟಿಗರು ಕೊಂಡಾಡುತ್ತಿದ್ದಾರೆ.

2014 ರಿಂದ 2021ರವರೆಗೆ ಆಸ್ಟ್ರಿಯಾದಲ್ಲಿ ಯೂಕ್ರೇನ್ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಅಲೆಕ್ಸಾಂಡರ್ ಶೆರ್ಬಾ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ಉಕ್ರೇನಿಯನ್ನರು ನಿಜವಾಗಿಯೂ ಕಠಿಣ ಬಿಸ್ಕೆಟ್​ಗಳು ಎಂದು ಬರೆದುಕೊಂಡಿದ್ದಾರೆ.

ಇನ್ನೂ ರಷ್ಯಾ ಮತ್ತು ಯೂಕ್ರೇನ್​ ನಡುವೆ ಯುದ್ಧ ಮುಂದುವರಿದಿದೆ. ಇಂದು ನಡೆದ ಸಂಧಾನ ಸಭೆ ವಿಫಲವಾಗಿದ್ದು, ಇದರ ಬೆನ್ನಲ್ಲೇ ರಷ್ಯಾ ಯೂಕ್ರೇನ್​ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net