ಬಾಯ್​ಫ್ರೆಂಡ್​ ಜತೆ ಒಂದೇ ಮನೆಯಲ್ಲಿ ವಾಸವಿದ್ದ ಕಿರಿಯ ಕಲಾವಿದೆ ಆತ್ಮಹತ್ಯೆ: ಕಾರಣ ಬಿಚ್ಚಿಟ್ಟ ಸಹೋದರಿ

Junior Artist
Published on

ಹೈದರಾಬಾದ್​: ಬಾಯ್​ಫ್ರೆಂಡ್​ ಮೋಸ ಮಾಡಿದ್ದಕ್ಕೆ ಮನನೊಂದು ಟಾಲಿವುಡ್​ ಕಿರಿಯ ಕಲಾವಿದೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನ ಬಂಜಾರ ಹಿಲ್ಸ್​ನಲ್ಲಿ ನಡೆದಿದೆ. ​

ಅನುರಾಧ (22) ಮೃತ ಕಲಾವಿದೆ. ಈಕೆ ಫಿಲ್ಮ್​ ನಗರದಲ್ಲಿ ಸಹ ಕಿರಿಯ ಕಲಾವಿದ ಕಿರಣ್​ ಎಂಬಾತನ ಜತೆ ಕಳೆದ ಮೂರು ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಕೆಳಗಿನ ಕೊಠಡಿಯಲ್ಲಿದ್ದ ಕೆಲ ಯುವಕರು ಅನುರಾಧ ಕೊಠಡಿಯಿಂದ ಗಬ್ಬು ವಾಸನೆ ಬರುತ್ತಿರುವುದನ್ನು ಗಮನಿಸಿ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದರು.

ಅನುಮಾನಗೊಂಡ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಧಾವಿಸಿದ ಪೊಲೀಸರು ಮನೆಯ ಬಾಗಿಲನ್ನು ಮರಿದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಅನುರಾಧ ಮೃತದೇಹ ಪತ್ತೆಯಾಗಿದೆ. ಆಕೆಯ ಮೃತದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.

ಅನುರಾಧ ಪಾಲಕರು ಕಿರಣ್​ ವಿರುದ್ಧ ದೂರು ದಾಖಲಿಸಿದ್ದಾರೆ. ಆರು ವರ್ಷಗಳಿಂದ ನಮ್ಮ ಮಗಳು ಕಿರಣ್​ ಎಂಬಾತನ್ನು ಪ್ರೀತಿಸುತ್ತಿದ್ದಳು. ಆಕೆಗೆ ಗೊತ್ತಿಲ್ಲದಂತೆ ಕಿರಣ್​ ಇನ್ನೊರ್ವ ಯುವತಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು. ಇದು ಅನುರಾಧಳಿಗೆ ತಿಳಿದು ಬಾಯ್​ಫ್ರೆಂಡ್​ನಿಂದ ಮೋಸ ಹೋಗಿದ್ದನ್ನು ಸಹಿಸದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅನುರಾಧ ಸಹೋದರಿ ಪೊಲೀಸರಿಗೆ ತಿಳಿಸಿದ್ದಾರೆ.

ಅನುಮಾನಸ್ಪದ ಸಾವು ಪ್ರಕರಣವನ್ನು ದಾಖಲಿಸಿರುವ ಬಂಜಾರ ಹಿಲ್ಸ್​ ಪೊಲೀಸರು ತನಿಖೆ ಕೈಗೊಂಡಿದ್ದು, ತಲೆಮರೆಸಿಕೊಂಡಿರುವ ಕಿರಣ್​ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net