ಹೃದಯಾಘಾತದಿಂದ ಕೊರಿಯೋಗ್ರಾಫರ್ ಟೀನಾ ಸಿಧು ಗೋವಾದಲ್ಲಿ ನಿಧನ

Teena Sadhu
Published on

ಪಣಜಿ: ರಿಯಾಲಿಟಿ ಶೋ ವಿಜೇತೆ ಹಾಗೂ ಟಾಲಿವುಡ್​ ಕೊರಿಯೋಗ್ರಾಫರ್ ಟೀನಾ ಸಿಧು ಇತ್ತೀಚೆಗಷ್ಟೇ ಗೋವಾದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಕೆಲವು ಮೂಲಗಳ ಪ್ರಕಾರ ಹೃದಯಾಘಾತದಿಂದ ಟೀನಾ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ, ಸಾವಿನ ಕಾರಣ ಬಗ್ಗೆ ಇನ್ನು ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ಟೀನಾ ಸಾವಿನ ಸುದ್ದಿಯನ್ನು ಕೊರಿಯೋಗ್ರಾಫರ್​ ಆಟ ಸಂದೀಪ್​ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

ಟೀನಾ ಅವರ ನಿಧನದ ಸುದ್ದಿಯಿಂದ ಆಘಾತ ಮತ್ತು ತೀವ್ರ ದುಃಖವಾಗಿದೆ. ಡಾನ್ಸ್ ರಿಯಾಲಿಟಿ ಶೋನಲ್ಲಿ ನನ್ನ ಪಾರ್ಟ್ನರ್​ ಆಗಿದ್ದರು. ಅವರು ತುಂಬಾ ವಿನಮ್ರ ವ್ಯಕ್ತಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಟೀನಾಗೆ ಸದ್ಗತಿ ಸಿಗಲಿ ಎಂದು ಸಂದೀಪ್​ ಸಂತಾಪ ಸೂಚಿಸಿದ್ದಾರೆ.

ಟೀನಾ ಸಾವಿನ ಸುದ್ದಿ ಕೇಳಿ ಡಾನ್ಸ್ ರಿಯಾಲಿಟಿ ಶೋನ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅವರು ಸ್ಪರ್ಧಿಗಳೊಂದಿಗೆ ಒಂದು ಕಾಲಾವಧಿಯಲ್ಲಿ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಇದೀಗ ಟೀನಾ ಅವರ ಅಕಾಲಿಕ ನಿಧನವು ಅವರನ್ನು ಬಹಳವಾಗಿ ದುಃಖಿಸಿದೆ.

ಸಕ್ರಿಯ ಇನ್‌ಸ್ಟಾಗ್ರಾಂ ಬಳಕೆದಾರರಾಗಿದ್ದ ಟೀನಾ, ಪಾಪ್ ಗಾಯಕಿ ಮತ್ತು ಪ್ರದರ್ಶಕಿಯೂ ಆಗಿದ್ದರು. ಅವರು ರಿಯಾಲಿಟಿ ಶೋ ಆಟಾದಲ್ಲಿ ತೀರ್ಪುಗಾರರಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net