ಆನೆಯ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯಲು ಯತ್ನಿಸಿದ ಬಾಲಕಿ: ಮುಂದೇನಾಯ್ತು? ಇಲ್ಲಿದೆ ವೈರಲ್​ ವಿಡಿಯೋ...

Elephant
Published on

ಗುವಾಹಟಿ: ಜನರು ಮೇಕೆ ಅಥವಾ ಹಸುವಿನ ಕೆಚ್ಚಲಿನಿಂದ ನೇರವಾಗಿ ಹಾಲು ಕುಡಿಯುವುದನ್ನು ನೋಡಿದ್ದೇವೆ. ಆದರೆ, ಪುಟ್ಟ ಬಾಲಕಿಯೊಬ್ಬಳು ತಾಯಿ ಆನೆಯ ಕೆಚ್ಚಲಿನಿಂದ ಹಾಲು ಕುಡಿಯಲು ಯತ್ನಿಸಿರುವ ಘಟನೆ ಅಸ್ಸಾಂನಲ್ಲಿ ಘಟನೆ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಸ್ಸಾಂನ ಗೋಲಘಾಟ್​ ಜಿಲ್ಲೆಯ ಮೂರು ವರ್ಷದ ಬಾಲಕಿ ಹರ್ಷಿತಾ ಬೋರಾ, ತಾಯಿ ಆನೆಯ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯಲು ಯತ್ನಿಸಿದ್ದಾಳೆ. ಅಲ್ಲದೆ, ಆನೆಯ ಕೆಳಗಡೆಯೇ ನಿಂತು ಆಟವಾಡಿದ್ದಾಳೆ. ಬಾಲಕಿ ಕೆಚ್ಚಲನ್ನು ಹಿಡಿದುಕೊಂಡಿರುವುದು ಆನೆಗೆ ತಿಳಿದಿದ್ದರೂ ಒಂಚೂರು ಕದಲದೇ ಬಾಲಕಿಯ ಮೇಲೆ ಮಾತೃ ಪ್ರೇಮವನ್ನು ತೋರಿದೆ.

ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಆನೆಗಳು ಒಮ್ಮೆಲೇ ಕೋಪದಿಂದ ಪ್ರತಿಕ್ರಿಯಿಸುತ್ತವೆ. ಕೆಲವೊಮ್ಮೆ ಸಾಕಿದ ಆನೆಗಳು ಕೂಡ ತಾಳ್ಮೆ ಕಳೆದುಕೊಳ್ಳುತ್ತವೆ. ಸೊಂಡಿಲಿನಿಂದ ಹಿಡಿದು ಎಸೆಯುವುದಲ್ಲದೆ, ಕಾಲುಗಳಿಂದ ತುಳಿದು ಸಾಯಿಸುವ ಸಾಧ್ಯತೆಯು ಇರುತ್ತದೆ. ಆದರೆ, ಬಾಲಕಿ ವಿಚಾರದಲ್ಲಿ ಆನೆ ನಡೆದುಕೊಂಡ ರೀತಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಹರ್ಷಿತಾ ಆನೆಯೊಂದಿಗೆ ಆಟವಾಡುತ್ತಿರುವುದು ಕಂಡುಬಂದಿದೆ. ಅವಳು ಆನೆಗಳನ್ನು ಬಿನು ಎಂದು ಕರೆಯುತ್ತಾಳೆ. ವೈರಲ್ ವಿಡಿಯೋದಲ್ಲಿ ಬಿನು ಮತ್ತು ಹರ್ಷಿತಾ ಒಟ್ಟಿಗೆ ತಮ್ಮ ಸಮಯವನ್ನು ಆನಂದಿಸುತ್ತಿರುವುದು ಕಂಡುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net