More

    U19 World Cup: ಬಾಂಗ್ಲಾ ಬಗ್ಗು ಬಡಿದ ಭಾರತ.. 2 ವರ್ಷದ ಹಿಂದಿನ ಸೇಡು ತೀರಿಸಿಕೊಂಡು ಸೆಮೀಸ್​ಗೆ ಲಗ್ಗೆ

    ಆಂಟಿಗುವಾ: ಅಂಡರ್​ 19 ವಿಶ್ವಕಪ್​ ಟೂರ್ನಿಯ ಕ್ವಾರ್ಟರ್​ ಫೈನಲ್​ನಲ್ಲಿ ಎದುರಾಳಿ ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಟೀಮ್​ ಇಂಡಿಯಾ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಎರಡು ವರ್ಷಗಳ ಹಿಂದಿನ ಬಾಂಗ್ಲಾ ವರ್ತನೆಗೆ ಬ್ಲೂ ಬಾಯ್ಸ್​ ಸೇಡು ತೀರಿಸಿಕೊಂಡಿದೆ.

    ಟಾಸ್​ ಗೆದ್ದ ಟೀಮ್​ ಇಂಡಿಯಾ ನಾಯಕ ಯಶ್​ ಧುಲ್​ ಫೀಲ್ಡಿಂಗ್​ ಆಯ್ದುಕೊಳ್ಳುವ ಮೂಲಕ ಎದುರಾಳಿ ಬಾಂಗ್ಲಾವನ್ನು ಬ್ಯಾಟಿಂಗ್​ ಆಹ್ವಾನಿಸಿದರು. ಆರಂಭದಲ್ಲೇ ರವಿ ಕುಮಾರ್​ (14ಕ್ಕೆ 3) ಮತ್ತು ವಿಕ್ಕಿ ಒಟ್ಸ್ವಾಲ್​ (25ಕ್ಕೆ 2) ಮಾರಕ ಬೌಲಿಂಗ್​ ದಾಳಿಗೆ ನಲುಗಿದ ಬಾಂಗ್ಲಾ 37.1 ಓವರ್​ಗಳಲ್ಲಿ 111 ರನ್​ಗೆ ಸರ್ವಪತನ ಕಂಡಿತು.

    ಗುರಿ ಬೆನ್ನತ್ತಿದ ಭಾರತ 30.5 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 117 ರನ್​ ಕಲೆಹಾಕುವ ಮೂಲಕ 5 ವಿಕೆಟ್​ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್​​ ಹಂತಕ್ಕೇರಿತು. ಭಾರತದ ಪರ ಆಂಗ್ಕ್ರಿಶ್ ರಘುವಂಶಿ (44), ಶೇಕ್​ ರಶೀದ್​ (26) ಮತ್ತು ಯಶ್​ ಧುಲ್​ (ಅಜೇಯ 20) ಉತ್ತಮ ಪ್ರದರ್ಶನ ನೀಡಿದರು. ಸೆಮಿಫೈನಲ್​ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

    ಸೇಡು ತೀರಿಸಿಕೊಂಡ ಭಾರತ
    2020 ಅಂಡರ್​ 19 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಾಂಗ್ಲಾದೇಶ, ಚೊಚ್ಚಲ ಐಸಿಸಿ ಟ್ರೋಫಿ ಗೆದ್ದ ಖುಷಿಯಲ್ಲಿ ಮೈಮರೆತು ಟೀಮ್​ ಇಂಡಿಯಾ ಆಟಗಾರರ ಜತೆ ಕೆಟ್ಟದಾಗಿ ನಡೆದುಕೊಂಡಿದ್ದರು. ಕ್ರೀಡಾಸ್ಫೂರ್ತಿಯನ್ನು ಮೆರೆಯದೇ ಟೀಂ ಇಂಡಿಯಾವನ್ನು ಅಣುಕಿಸಿದ್ದರು. ಈ ವೇಳೆ ಮೈದಾನದಲ್ಲೇ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿಯು ನಡೆದಿತ್ತು. ಈ ಘಟನೆ ಭಾರೀ ವಿವಾದವನ್ನು ಹುಟ್ಟುಹಾಕಿತ್ತು. ಬಾಂಗ್ಲಾ ಆಟಗಾರರ ವರ್ತನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲೇ ಬಾಂಗ್ಲಾವನ್ನು ಟೀಮ್​ ಇಂಡಿಯಾ ಮನೆಗೆ ಕಳುಹಿಸಿದ್ದು, ಎರಡು ವರ್ಷದ ಹಿಂದಿನ ಸೇಡನ್ನು ತೀರಿಸಿಕೊಂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts