ಈ ಫೋಟೋದಲ್ಲಿರೋದು ನಾಯಿ ತಲೆ ಅಂದ್ಕೊಂಡಿದ್ದೀರಾ? ನಿಜ ಗೊತ್ತಾದ್ರೆ ನಿಮ್ಮ ಕಣ್ಣನ್ನು ನೀವೇ ನಂಬಲ್ಲ!

Dog
Published on

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳದ್ದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬ್ರೆಜಿಲ್​ನ ರಿಯೋ ಡಿ ಜನೈರೊ ಮೂಲದ ದಂಪತಿಗೆ ತಮ್ಮ ಕಣ್ಣನೇ ತಾವು ನಂಬಲಾರದಂತಹ ಕ್ಷಣವೊಂದು ಘಟಿಸಿದೆ. ತಮ್ಮ ಮನೆಯ ಟೆರೆಸ್​ ಮೇಲಿಂದ ನಿಂತು ನೋಡುವಾಗ ಪಕ್ಕದ ಮನೆಯ ಟೆರೆಸ್​ನಲ್ಲಿ ನಾಯಿಯ ತಲೆಯೊಂದು ಕಾಣಿಸಿಕೊಂಡಿದೆ. ಆದರೆ, ಸ್ಪಷ್ಟವಾಗಿ ಗೋಚರಿಸದಿದ್ದಾಗ ಏನಿರಬಹುದು ಎಂದು ತಿಳಿದುಕೊಳ್ಳಲು ಮೊಬೈಲ್​ ವಿಡಿಯೋ ರೆಕಾರ್ಡ್ ಆನ್​ ಮಾಡಿ ವಿಡಿಯೋ​ ಮಾಡುತ್ತಾ ಅದನ್ನು ಜೂಮ್​ ಮಾಡಿದಾಗ ಅಚ್ಚರಿಯೊಂದು ಕಾದಿತ್ತು.

ಏಕೆಂದರೆ, ಇದುವರೆಗೂ ನಾಯಿ ಅಂದುಕೊಂಡಿದ್ದ ದಂಪತಿ ತಮ್ಮ ಕಣ್ಣನ್ನೇ ಒಂದು ಕ್ಷಣ ನಂಬಲಿಲ್ಲ. ಏಕೆಂದರೆ, ಅದು ನಾಯಿಯ ತಲೆಯಾಗಿರಲಿಲ್ಲ. ಬದಲಾಗಿ ಅದು ಬೆಕ್ಕು ಎಂದು ತಿಳಿದು ದಂಪತಿ ಬೆರಗಾದರು. ವಿಡಿಯೋವನ್ನು ಜೂಮ್​ ಮಾಡುವಾಗ ಬೆಕ್ಕು ಹಿಂದಕ್ಕೆ ತಿರುಗಿದಾಗಲೇ ಅದು ನಾಯಿಯಲ್ಲಿ ಬೆಕ್ಕು ಎಂದು ಗೊತ್ತಾಗಿದ್ದು.

ಇನ್ನು ಈ ಘಟನೆ ಡಿಸೆಂಬರ್​ 23ರಂದು ನಡೆದಿದ್ದು, ಜನವರಿ 4ರಂದು ವೈರಲ್​ ಹಗ್​ ಎಂಬ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಜನವರಿ 4ರಂದು ಶೇರ್​ ಮಾಡಿದೆ. ವಿಡಿಯೋ ವೈರಲ್​ ಆಗಿದೆ. ಇದುವರೆಗೂ 12 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋ ನೋಡಿದ ಅನೇಕರು ನಿಜಕ್ಕೂ ನಮ್ಮ ಕಣ್ಣನ್ನು ನಾವೇ ನಂಬಲಾಗಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net