ಗಂಡ ಚಾಲಕನಾಗಿದ್ದೇ ತಪ್ಪಾ? ದಸರಾ ಹಬ್ಬದಂದೇ ಉಸಿರು ಚೆಲ್ಲಿದ ಯುವತಿ..!

Woman
Published on

ನಲ್ಗೊಂಡ: ಗಂಡ ದಸರಾ ಹಬ್ಬಕ್ಕೆ ಮನೆ ಬರಲಿಲ್ಲ ಅಂತಾ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅಮಂಗಲ್ಲು ಮೆಡಿಗಡ್ಡದಲ್ಲಿ ನಡೆದಿದೆ.

ವಿದ್ಯಾವತ್​​ ಮೌನಿಕಾ (20) ಮೃತ ಯುವತಿ. ಮೆಡಿಗುಡ್ಡದ ಈಕೆ, ತನ್ನ ಮಾವನ ಮಗನಾದ ಅನಿಲ್​ ಎಂಬಾತನನ್ನು ಆರು ತಿಂಗಳ ಹಿಂದೆ ಮದುವೆ ಆಗಿದ್ದಳು. ಇಬ್ಬರು ಕೂಡ ಒಂದೇ ಗ್ರಾಮದವರು.

ಅನಿಲ್​ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಇಡೀ ಕುಟುಂಬದ ಜವಬ್ದಾರಿ ಆತನ ಮೇಲಿದೆ. ಮೊದಲೇ ಚಾಲಕನ ವೃತ್ತಿ ಆಗಿದ್ದರಿಂದ ಬೇರೆ ಬೇರೆ ಊರುಗಳಿಗೆ ಹೋಗಿದ್ದ. ಹೀಗಾಗಿ ದಸರಾ ಹಬ್ಬಕ್ಕೆ ಮನೆಗೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ಮನನೊಂದ ಮೌನಿಕಾ ತೋಟಕ್ಕೆ ತೆರಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿಷ ಕುಡಿದು ನರಳಾಡುತ್ತಿದ್ದ ಮೌನಿಕಾಳನ್ನು ನೋಡಿದ ಸ್ಥಳೀಯ ಆಕೆಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟರಲ್ಲಾಗಲೇ ಆಕೆಯ ಪ್ರಾಣ ಹೋಗಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಮೌನಿಕಾಳನ್ನು ಕಳೆದುಕೊಂಡ ಎರಡು ಕುಟುಂಬ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net