ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಪ್ರಭಾಸ್ ಮದುವೆ ಕುರಿತು ಅಚ್ಚರಿಯ ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ..!​

Prabhas - Final
Published on

ಹೈದರಾಬಾದ್​: ಭಾರತೀಯ ಚಿತ್ರರಂಗದ ಮೋಸ್ಟ್​ ಬ್ಯಾಚುಲರ್ಸ್​ ನಟರಲ್ಲಿ ಪ್ರಭಾಸ್​ ಕೂಡ ಒಬ್ಬರು. ಬಾಹುಬಲಿ ಚಿತ್ರದ ಮೂಲಕ ವಿಶ್ವಖ್ಯಾತಿ ಗಳಿಸಿರುವ ಪ್ರಭಾಸ್ 41 ವರ್ಷ ವಯಸ್ಸಾದರೂ ಇನ್ನು ಮದುವೆ ಆಗದೇ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ.

ಪ್ರಭಾಸ್​ ಯಾವಾಗ ಮದುವೆ ಆಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳ​ಲ್ಲಿ ಕಾಡುತ್ತಿದ್ದು, ಅದಕ್ಕೆ ಉತ್ತರವನ್ನು ಜ್ಯೋತಿಷಿಗಳ ನೀಡಿದ್ದಾರೆ. ಪ್ರಭಾಸ್​ ಅವರ ಜಾತಕ ಫಲದ ಆಧಾರದ ಮೇಲೆ ಅವರು ಮದುವೆ ಯಾವಾಗ ಆಗಲಿದ್ದಾರೆ ಎಂಬ ಭವಿಷ್ಯವನ್ನು ನುಡಿದಿದ್ದಾರೆ.

ಪ್ರಭಾಸ್​ ಮತ್ತು ಅನುಷ್ಕಾ ಶೆಟ್ಟಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದಾದ ಬಳಿಕ ಪ್ರಭಾಸ್​ ಉದ್ಯಮಿಯೊಬ್ಬರ ಮಗಳನ್ನು ವರಿಸಲಿದ್ದಾರೆ ಎಂಬ ಸುದ್ದಿಯು ಹರಿದಾಡಿತ್ತು. ಆದರೆ, ಅದ್ಯಾವುದು ನಿಜ ಆಗದೇ ಇರುವುದು ಅಭಿಮಾನಿಗಳಿಗೆ ಈಗಲೂ ಬೇಸರವಿದೆ. ಇದೀಗ ಸೆಲೆಬ್ರಿಟಿ ಜ್ಯೋತಿಷಿ ಹಾಗೂ ಫೇಸ್​ ರೀಡರ್​ ಆಗಿರುವ ಜಗನ್ನಾಥ್​ ಗುರೂಜಿ ಅವರು ಪ್ರಭಾಸ್​ ಮದುವೆ ವಿಚಾರದಲ್ಲಿ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯದ ಮೇಲೆ ಕೊಂಚ ನಂಬಿಕೆಯೇ ಇದೆ. ಅದಕ್ಕೆ ಕಾರಣ ತಾರಾ ದಂಪತಿ ಸಮಂತಾ-ನಾಗಚೈತನ್ಯ ವಿಚ್ಛೇದನ. ವರ್ಷಗಳ ಹಿಂದೆಯೇ ಜಗನ್ನಾಥ ಗುರೂಜಿ ಅವರು ಡಿವೋರ್ಸ್​ ಬಗ್ಗೆ ಭವಿಷ್ಯ ನುಡಿದಿದ್ದರು. ಇಂದು ನಿಜವಾಗಿದೆ.

ಇದೀಗ ಪ್ರಭಾಸ್​ ಮದುವೆ ವಿಚಾರದಲ್ಲಿ ಜಗನ್ನಾಥ ಗುರೂಜಿ ಭವಿಷ್ಯ ನುಡಿದಿದ್ದು, 2022ರಲ್ಲಿ ಪ್ರಭಾಸ್​ ಮದುವೆ ಆಗಲಿದ್ದಾರಂತೆ. ಆದಾಗ್ಯೂ, ಅಭಿಮಾನಿಗಳು ಬಹುನಿರೀಕ್ಷಿತ ಘೋಷಣೆಗಾಗಿ ಸ್ವಲ್ಪ ಸಮಯ ಕಾಯಬೇಕಾಗಬಹುದು. ಬಹುಶಃ 2023 ರ ದ್ವಿತೀಯಾರ್ಧದಲ್ಲಿ ಮತ್ತು 2024ರಲ್ಲಿ ಯಾವಾಗ ಬೇಕಾದರೂ, ಪ್ರಭಾಸ್ ತನ್ನ ವಿವಾಹವನ್ನು ಘೋಷಿಸಬಹುದು. ಅವರು ಚಿತ್ರರಂಗದ ಹೊರಗಿನ ಯಾರನ್ನಾದರೂ ಮದುವೆಯಾಗುವ ಬಲವಾದ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇದು ಎಷ್ಟು ನಿಜ ಆಗುತ್ತೋ ಗೊತ್ತಿಲ್ಲ. ಆದರೆ, ಅಂತಹ ಘಳಿಗೆಗಾಗಿ ಅಭಿಮಾನಿ ಸಮೂಹ ಕಾದು ಕುಳಿತಿರುವುದಂತೂ ಸತ್ಯ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net