ಇನ್ನೇನು ಕೆಲವೇ ದಿನಗಳಲ್ಲಿ ತಾಯ್ನಾಡಿಗೆ ಮರಳಬೇಕಿದ್ದ ಭಾರತೀಯ ಮೂಲದ ಯುವಕ ಅಮೆರಿಕದಲ್ಲಿ ದುರಂತ ಸಾವು

1196104
Published on

ಹೈದರಾಬಾದ್​: ತಾಯ್ನಾಡಿಗೆ ಮರಳುವ ಆಸೆಯಿಂದ ಮನೆಯವರಿಗೆ ಉಡುಗೊರೆ ತರಲು ಶಾಪಿಂಗ್​ಗೆ ಹೋಗಿದ್ದ ತೆಲಂಗಾಣ ಮೂಲದ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಅಮೆರಿಕದ ಬಕಿ ರಾಜ್ಯದ ಓಹಿಯೋದಲ್ಲಿ ನಡೆದಿದೆ.

ಮೃತ ಯುವಕನನ್ನು ಚಿರು (22) ಎಂದು ಗುರುತಿಸಲಾಗಿದೆ. ಈತ ತೆಲಂಗಾಣದ ಸೂರ್ಯಪೇಟೆಯ ನಿವಾಸಿ. ಓಹಿಯೋ ನಗರದಲ್ಲಿ ವಾಸವಿದ್ದ. ಡಿಸೆಂಬರ್​ 15ರಂದು ತಾಯ್ನಾಡಿಗೆ ಮರಳಲು ಸಿದ್ಧವಾಗಿದ್ದ. ಈ ಹಿನ್ನೆಲೆಯಲ್ಲಿ ಮನೆಯವರಿಗೆ ಉಡುಗೊರೆ ತರಲೆಂದು ಯುವತಿಯೊಬ್ಬಳ ಜತೆ ಶಾಪಿಂಗ್​ಗೆ ಹೋಗಿದ್ದ.

ಮನೆಯಿಂದ ಹೊರಟ ಚಿರುವಿನ ಕಾರು ಸ್ಕಿಡ್​ ಆಗಿ ಎದುರಿಗೆ ಬರುತ್ತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಿರು ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.

ಸಾಯಿ ಓಹಿಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್​ ಡಿಗ್ರಿ ಓದುತ್ತಿದ್ದ. ಚಿರು ಸೂರ್ಯಪೇಟೆಯ ನಲ್ಲಲಬಾವಿ ನಿವಾಸಿಗಳಾದ ನರೇಂದ್ರುನಿ ಲಿಂಗಮೂರ್ತಿ ಮತ್ತು ಸುಧಾ ದಂಪತಿಯ ಪುತ್ರ. ಗಂಭೀರ ಗಾಯಗೊಂಡಿರುವ ಯುವತಿ ತೆಲಂಗಾಣದ ನಲ್ಗೊಂಡ ಮೂಲದವಳು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net