

ಮುಂಬೈ: ಬಾಲಿವುಡ್ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದ 7ನೇ ಸೀಸನ್ನ 6ನೇ ಎಪಿಸೋಡ್ನ ಮುಖ್ಯ ಅತಿಥಿಗಳಾಗಿ ನಟಿ ಸೋನಮ್ ಕಪೂರ್ ಮತ್ತು ಆಕೆಯ ಸೋದರಸಂಬಂಧಿ ಅರ್ಜುನ್ ಕಪೂರ್ ಭಾಗವಹಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೊಮೋ ಬಿಡುಗಡೆಯಾಗಿದ್ದು, ಅರ್ಜುನ್ ಬಗ್ಗೆ ಸೋನಮ್ ಹೇಳಿರುವ ಮಾತು ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಗರ್ಭಿಣಿ ಸೋನಮ್ ಕಪ್ಪು ಬಣ್ಣದ ಗೌನ್ ಧರಿಸಿ, ಮಿಂಚಿದರೆ, ಅವರ ಸಹೋದರ ಅರ್ಜುನ್ ಸ್ಪೋರ್ಟ್ಸ್ ಟ್ಯಾನ್ ಜಾಕೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮ ಅಂದಮೇಲೆ ಕೇಳಬೇಕಾ, ಅಲ್ಲಿ ಸಿನಿಮಾ ಸಂಬಂಧ ಪ್ರಶ್ನೆಗಳಿಗಿಂತ ವೈಯಕ್ತಿಕ ಪ್ರಶ್ನೆಗಳನ್ನೇ ಹೆಚ್ಚು ಕೇಳಲಾಗುತ್ತದೆ. ಅದರಲ್ಲೂ ಸೆಲೆಬ್ರಿಟಿಗಳ ಸೆಕ್ಸ್ ಲೈಫ್ ಬಗ್ಗೆಯೇ ನಿರೂಪಕ ಕರಣ್ ಜೋಹರ್ ಹೆಚ್ಚೆಚ್ಚು ಕೆದಕುತ್ತಾರೆ. ಈ ಕಾರಣದಿಂದಲೇ ಈ ಕಾರ್ಯಕ್ರಮ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತದೆ.
ಇನ್ನು ಸೋನಮ್ ಮತ್ತು ಅರ್ಜುನ್ ಎಪಿಸೋಡ್ ವಿಚಾರಕ್ಕೆ ಬರುವುದಾದರೆ, ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಅರ್ಜುನ್ ಬಗ್ಗೆ ಸೋನಮ್ ಸ್ಫೋಟಕ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ನಿಮ್ಮ ಎಷ್ಟು ಫ್ರೆಂಡ್ಸ್ಗಳ ಜೊತೆ ಅರ್ಜುನ್ ಮಲಗಿದ್ದಾರೆ ಎಂದು ಕರಣ್ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸುವ ಸೋನಮ್, ನನ್ನ ಎಲ್ಲ ಫ್ರೆಂಡ್ಸ್ ಜೊತೆಯು ಮಲಗಿದ್ದಾನೆ. ಯಾರೊಬ್ಬರನ್ನು ಬಿಟ್ಟಿಲ್ಲ ಎಂದು ಹೇಳುತ್ತಾಳೆ. ತಕ್ಷಣ ಸೋನಮ್ ಕಡೆ ನೋಡುವ ಅರ್ಜುನ್, ನೀನೆಂಥಾ ಸಹೋದರಿ? ನಮ್ಮ ಬಗ್ಗೆ ಏನು ಹೇಳುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿ ನಗುತ್ತಾರೆ.
ಶೋನ ಇತಿಹಾಸದಲ್ಲೇ ಸೋನಮ್ ಅತ್ಯಂತ ವಿವಾದಾತ್ಮಕ ಅತಿಥಿಗಳಲ್ಲಿ ಒಬ್ಬರು ಎಂಬುದು ಗಮನಾರ್ಹವಾಗಿದೆ. ಈ ಹಿಂದೆ, ಸೋನಂ ಅವರು ರಣಬೀರ್ ಕಪೂರ್ ಉತ್ತಮ ಬಾಯ್ಫ್ರೆಂಡ್ ಮೆಟೀರಿಯಲ್ ಅಲ್ಲ ಎಂದಿದ್ದರು. ಅಲ್ಲದೆ, ಸರಳವಾಗಿ ಕಾಣುವ ನಟಿಯರೆಲ್ಲರೂ ಪ್ರತಿಭಾವಂತರು ಎಂಬ ಊಹೆಯ ಬಗ್ಗೆ ತಮ್ಮದೇ ಕಾಮೆಂಟ್ ಮಾಡುವ ಮೂಲಕ ಬಾಲಿವುಡ್ನಲ್ಲಿ ಕೋಲಾಹಲವನ್ನೇ ಉಂಟು ಮಾಡಿದ್ದರು.
ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಈಗಾಗಲೇ ಆಲಿಯಾ ಭಟ್-ರಣವೀರ್ ಸಿಂಗ್, ಜಾಹ್ನವಿ ಕಪೂರ್-ಸಾರಾ ಅಲಿ ಖಾನ್, ಸಮಂತಾ ರುತು ಪ್ರಭು-ಅಕ್ಷಯ್ ಕುಮಾರ್, ಅನನ್ಯ ಪಾಂಡೆ-ವಿಜಯ ದೇವರಕೊಂಡ ಮತ್ತು ಕರೀನಾ ಕಪೂರ್-ಆಮೀರ್ ಖಾನ್ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಇದೀಗ ಸೋನಮ್ ಮತ್ತು ಅರ್ಜುನ್ ಭಾಗವಹಿಸಿದ್ದು, ಇದೇ ಆಗಸ್ಟ್ 11ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಕ್ರಾರ್ಯಕ್ರಮ ಪ್ರಸಾರವಾಗಲಿದೆ. (ಏಜೆನ್ಸೀಸ್)