ತಮ್ಮ ಮಗನ ಜತೆ ಹೋಲಿಸಿ ಶಾರುಖ್​ ಪುತ್ರನನ್ನು ಟ್ರೋಲ್ ಮಾಡುವವರಿಗೆ ನಟ ಮಾಧವನ್​ ಹೇಳಿದ್ದು ಹೀಗೆ...​

Aryan Khan
Published on

ಚೆನ್ನೈ: ತಮ್ಮ ಮಗನ ಜತೆ ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರನನ್ನು ಹೋಲಿಕೆ ಮಾಡಿ ಟ್ರೋಲ್​ ಮಾಡುತ್ತಿರುವ ಬಗ್ಗೆ ನಟ ಮಾಧವನ್​ ಪ್ರತಿಕ್ರಿಯಿಸಿದ್ದಾರೆ. ಶಾರುಖ್​ ಕೂಡ ಓರ್ವ ತಂದೆಯಾಗಿರುವುದರಿಂದ ಅವರ ಮಗನ ಬಗ್ಗೆ ಮಾತನಾಡುವಾಗ ಅವರ ಮನಸ್ಸಿಗೂ ನೋವಾಗುತ್ತದೆ ಎಂದಿದ್ದಾರೆ.

ಸ್ವಿಮ್ಮಿಂಗ್​ನಲ್ಲಿ ಆರ್​. ಮಾಧವನ್​ ಪುತ್ರ ವೇದಾಂತ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಇತ್ತೀಚೆಗೆ​ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಮಾಧವನ್​, ಪಾಲಕರಾಗಿ ತಾವು ಅನುಸರಿಸುತ್ತಿರುವ ತಂತ್ರಗಳ ಬಗ್ಗೆ ಹೇಳಿಕೊಂಡರು. ಅಲ್ಲದೆ, ಐಷಾರಾಮಿ ಜೀವನ ಹೊರತಾಗಿ ತಮ್ಮ ಮಗನನ್ನು ಹೇಗೆ ಬೆಳೆಸುತ್ತಿದ್ದಾರೆಂದು ವಿವರಿಸಿದರು.

ನಟ ಕಮ್ ನಿರ್ದೇಶಕರಾಗಿರುವ ಮಾಧವನ್​ ತಮ್ಮ ಮಗನನ್ನು ಜೀವನದಲ್ಲಿ ಬೆಳೆಸಿರುವ ರೀತಿ ಮತ್ತು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಶಾರುಖ್ ಖಾನ್ ಮಗ ಆರ್ಯನ್‌ ಬೆಳವಣಿಗೆಯನ್ನು ಹೋಲಿಸಿ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲಾಗುತ್ತಿದೆ. ಈ ಬಗ್ಗೆ ಮಾಧವನ್​ ಅವರನ್ನು ಪ್ರಶ್ನಿಸಲಾಯಿತು.

ನಾನು ಇದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಇಲ್ಲಿ ನಾವು ತಂದೆಯ (ಶಾರುಖ್) ಬಗ್ಗೆ ಮಾತನಾಡುತ್ತಿದ್ದೇವೆ. ಅವರ ಮಗ ಅಥವಾ ಮಗು ಏನು ಅನುಭವಿಸುತ್ತಾನೆಯೋ ಅದು ತಂದೆಗೆ ತುಂಬಾ ನೋವಿನಿಂದ ಕೂಡಿರುತ್ತದೆ. ಯಾರನ್ನಾದರೂ ನೋಯಿಸುತ್ತಿದ್ದೀರಿ ಮತ್ತು ಎಷ್ಟು ನೋಯಿಸುತ್ತಿರುವಿರಿ ಎಂಬುದನ್ನು ಅರಿತುಕೊಳ್ಳದೆಯೇ ಅದನ್ನು ಸುದ್ದಿ ಅಥವಾ ಮೀಮ್ಸ್​ ಮಾಡಿಬಿಡುತ್ತೇವೆ. ಆದರೆ, ಆ ನೋವಿನ ಬೆಂಕಿಗೆ ಇನ್ನಷ್ಟು ತಪ್ಪ ಸುರಿಯಲು ನನಗೆ ಇಷ್ಟವಿಲ್ಲ. ಪ್ರತಿಯೊಬ್ಬ ತಂದೆಯು ತಮ್ಮ ಮಗುವಿನ ಬಗ್ಗೆ ಹೆಮ್ಮೆಪಡುತ್ತಾರೆ ಮತ್ತು ತಮ್ಮ ಮಗ ಅಥವಾ ಮಗುವಿನ ಸಂಕಟವನ್ನು ಇಷ್ಟಪಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮಾಧವನ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net