ಕ್ಯಾಮೆರಾ ಕಂಡೊಡನೆ ಕಾಲ್ಕಿತ್ತ ಶಾರುಖ್​ ಪುತ್ರಿ: ಸಿಕ್ಕಾಪಟ್ಟೆ ಟ್ರೋಲ್​ ಆಯ್ತು ಸುಹಾನಾಳ​ ಹಾಟ್ ಲುಕ್​​

Suhana
Published on

ಮುಂಬೈ: ಬಾಲಿವುಡ್​ ಬಾದ್​ಷಾ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಹಿಂದಿ ಚಿತ್ರರಂಗದ ಉದಯೋನ್ಮುಖ ಪ್ರತಿಭೆ. ಸುಹಾನಾರ ಚೊಚ್ಚಲ ಚಿತ್ರ "ದಿ ಆರ್ಚೀಸ್‌" ಕಣ್ತುಂಬಿಕೊಳ್ಳಲು ಶಾರೂಖ್​ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದೀಗ ಸುಹಾನಾ ತನ್ನ ಹಾಟ್​ ಉಡುಗೆಯಿಂದಲೇ ಸುದ್ದಿಯಾಗಿದ್ದಾರೆ.

ಸುಹಾನಾ, ಪಾಪರಾಜಿಗಳನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಇನ್ನು ಕಲಿತಿಲ್ಲ ಎಂಬಂತೆ ಕಾಣುತ್ತದೆ. ಏಕೆಂದರೆ, ಕ್ಯಾಮೆರಾ ಕಣ್ಣುಗಳನ್ನು ನೋಡಿದ ಕೂಡಲೇ ಸುಹಾನಾ ಗಲಿಬಿಲಿಗೊಳ್ಳುತ್ತಾರೆ. ಇತ್ತೀಚೆಗೆ ಆಕೆ ಮುಂಬೈನಲ್ಲಿ ಕಾಣಿಸಿಕೊಂಡರು. ಸುಹಾನಾ ಕಾರಿನಿಂದ ಇಳಿಯುವಾಗ ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಂತಿರುವುದನ್ನು ನೋಡಿ ಒಂದು ಕ್ಷಣ ಗಾಬರಿಯಾದ ಸುಹಾನಾ ಅವರತ್ತ ನೋಡದೆಯೇ ಬೆನ್ನು ತಿರುಗಿಸಿ, ನಗುತ್ತಾ ತಮ್ಮ ಪಾಡಿಗೆ ಹೊರಟರು. ಈ ವೇಳೆ ಫೋಟೋಗ್ರಾಫರ್​ ಒಬ್ಬ ಸುಹಾನಾ ಜೀ... ನಿಮ್ಮ ಸಿನಿಮಾ ಬರಲಿದೆ. ನೀವು ಈಗ ಏನು ಚಿಂತೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ. ಇನ್ನೊಬ್ಬ ನಮ್ಮ ಮುಖವನ್ನು ನೆನಪಿಡಿ, ನಾವು ನಿಮ್ಮನ್ನು ನಿತ್ಯವೂ ಭೇಟಿ ಮಾಡುತ್ತೇವೆ ಎಂದರು. ಆದರೆ, ಯಾವುದಕ್ಕೂ ಉತ್ತರಿಸಿದೇ ಸುಹಾನಾ ಹೊರಟು ಹೋದರು. ಬಹುಶಃ ಸುಹಾನಾಗೆ ಪಾಪರಾಜಿಗಳನ್ನು ನಿಭಾಯಿಸುವುದು ಇನ್ನೂ ಕಲಿತಿಲ್ಲ ಎಂದು ತೋರುತ್ತದೆ.

ಸುಹನಾ ಅವರ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಆಕೆಯನ್ನು ಟ್ರೋಲ್​ ಮಾಡುತ್ತಿದ್ದಾರೆ. ಸುಹಾನಾಳ ಹಾಟ್​ ಉಡುಗೆಯನ್ನು ನೋಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸುಹಾನಾಗೆ ಬೆಂಬಲ ನೀಡಿದ್ದಾರೆ. ಅವಳಿಗೆ ಪಾಪರಾಜಿಗಳ ಎದುರು ಮುಜುಗರವಾಗುವಂತಿದ್ದರೆ, ಅವಳನ್ನು ಬಿಟ್ಟುಬಿಡಿ, ಒತ್ತಾಯಿಸಲು ಪ್ರಯತ್ನಿಸಬೇಡಿ ಎಂದಿದ್ದಾರೆ. ಇನ್ನೊಬ್ಬ ನೆಟ್ಟಿಗರ ಶೂನ್ಯ ಪ್ರತಿಭೆಗೆ ಚಿನ್ನದಂತಹ ಅವಕಾಶ ಎಂದು ಜರಿದಿದ್ದಾರೆ. ಅವಳು ಸುಂದರವಾಗಿದ್ದಾಳೆ ಆದರೆ, ಸ್ಟಾರ್​ ಆಗಲು ಸೂಕ್ತವಲ್ಲ, ಸುಹಾನಾ ಆ ಉಡುಗೆಯಲ್ಲಿ ತುಂಬಾ ಬೋಲ್ಡ್​ ಆಗಿ ಕಾಣುತ್ತಿದ್ದಾರೆ ಎಂದೆಲ್ಲಾ ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ಸುಹಾನಾ ನಟನೆಯ ದಿ ಆರ್ಚೀಸ್ ಸಿನಿಮಾವನ್ನು ಜೋಯಾ ಅಖ್ತರ್ ನಿರ್ದೇಶಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ. ಈ ಚಿತ್ರವು 2023 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net