128 ಮಿಲಿಯನ್​ ವೀಕ್ಷಣೆ: ಶಿಖರ್​ ಧವನ್​ ಮೆಚ್ಚಿರುವ ಈ ಮ್ಯಾಜಿಕ್​ ವಿಡಿಯೋ ನೋಡಿದ್ರೆ ನೀವು ಫಿದಾ ಆಗ್ತೀರಾ!

Magic
Published on

ನವದೆಹಲಿ: ಬಾಲಕನೊಬ್ಬ ಮ್ಯಾಜಿಕ್​ ಟ್ರಿಕ್​ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಜೂನ್​ 9ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಇದುವರೆಗೂ 128 ಮಿಲಿಯನ್​ಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಸಾಹಿಲ್​ ಆಜಾಮ್​ ಎಂಬುವರು ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಯಾವುದೇ ಅಡಿಬರಹವನ್ನು ನೀಡಿಲ್ಲ. ವಿಡಿಯೋ ಮೇಲೆ ಮಾತ್ರ "ಪ್ರತಿಭಾವಂತ ವಿದ್ಯಾರ್ಥಿ" ಎಂದು ಬರೆಯಲಾಗಿದೆ.

ವಿಡಿಯೋದಲ್ಲಿ ಏನಿದೆ?

ಶಾಲಾ ಕೊಠಡಿ ಒಳಗೆ ಬಾಲಕನ ಸುತ್ತ ಇರುವ ಆತನ ಸ್ನೇಹಿತರು ತುಂಬಾ ಉತ್ಸಾಹದಿಂದ ಮ್ಯಾಜಿಕ್​ ಟ್ರಿಕ್​ ನೋಡುತ್ತಿದ್ದಾರೆ. ಎರಡು ಕೈಗಳಲ್ಲಿ ಒಂದೊಂದು ಕಲ್ಲು ಹಿಡಿದಿರುವ ಬಾಲಕ ಯಾರಿಗೂ ಗೊತ್ತಾಗದಂತೆ ಎರಡು ಕೈಯಲ್ಲಿ ಇರುವ ಕಲ್ಲನ್ನು ಒಂದೇ ಕೈಗೆ ವರ್ಗಾಯಿಸುತ್ತಾನೆ.

ವಿಡಿಯೋ ನೋಡಿದ ನೆಟ್ಟಿಗರ ಬಾಲಕನ ಮ್ಯಾಜಿಕ್​ ಕೌಶಲ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ. ಇದು ವೇಗದ ಮ್ಯಾಜಿಕ್ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಆತನ ಕೂದಲು ನೋಡಿದರೆ, ಈತ ಭಾರತದ ಜಸ್ಟಿನ್​ ಬೈಬರ್​ ರೀತಿ ಕಾಣುತ್ತಿದ್ದಾನೆ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದು, ನಾನು ಈ ಮ್ಯಾಜಿಕ್​ ಟ್ರಿಕ್​ ಅನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ಆ ಪುಟ್ಟ ಜಾದೂಗಾರನಿಗೆ ನನ್ನ ನಮಸ್ಕಾರಗಳು ಎಂದಿದ್ದಾರೆ.

ಕೇವಲ 128 ಮಿಲಿಯನ್​ ವೀಕ್ಷಣೆ ಮಾತ್ರವಲ್ಲ, ಶಿಖರ್​ ಧವನ್​ ಸೇರಿದಂತೆ 6 ಮಿಲಿಯನ್​ಗೂ ಅಧಿಕ ಮಂದಿ ವಿಡಿಯೋಗೆ ಲೈಕ್ಸ್​ ಮಾಡಿದ್ದಾರೆ. ಈ ಮ್ಯಾಜಿಕ್​ ಟ್ರಿಕ್​ ಎಲ್ಲಿ ನಡೆದಿರುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ವಿಡಿಯೋ ಮಾತ್ರ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ. ಬಾಲಕನ ಮ್ಯಾಜಿಕ್​ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮಾಡುವುದನ್ನು ಮರೆಯಬೇಡಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net