ಹೂ ಅಂಟಾವ... ಸಿನಿಮಾಗಿಂತ ಮೇಕಿಂಗ್​ ವಿಡಿಯೋದಲ್ಲೇ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿರುವ ಸಮಂತಾ!

Samantha
Published on

ಹೈದರಾಬಾದ್​: ನಟ ಅಲ್ಲು ಅರ್ಜುನ್​ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ “ಪುಷ್ಪ” ಬಾಕ್ಸ್​ಆಫೀಸ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಚಿತ್ರದ ಐಟಂ ಸಾಂಗ್​ನಲ್ಲಿ ನಟಿ ಸಮಂತಾ ಕಾಣಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. “ಹೂಂ ಅಂತೀರಾ – ಊಹೂ ಅಂತೀರಾ” ಹಾಡಿನಲ್ಲಿ ಮೈಚಳಿ ಬಿಟ್ಟು ನಟಿಸುವ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ವಿಶೇಷ ಮ್ಯೂಸಿಕ್​ ಮತ್ತು ಸಾಹಿತ್ಯದಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿರುವ ಐಟಂ ಸಾಂಗ್​ ವಿಶೇಷ ದಾಖಲೆಯನ್ನು ಬರೆದಿರುವುದಲ್ಲದೆ, ಆರಂಭದಲ್ಲಿ ಭಾರೀ ವಿವಾದಕ್ಕೂ ಕಾರಣವಾಗಿತ್ತು.

ತಾಜಾ ವಿಷಯವೆಂದರೆ, ಇದೀಗ ಸಮಂತಾ ಅವರು ಹಾಡಿನ ಮೇಕಿಂಗ್​ ವಿಡಿಯೋವನ್ನು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ ಮಾಡಿದ್ದಾರೆ. 41 ಸೆಕೆಂಡ್​ ವಿಡಿಯೋದಲ್ಲಿ ಸಮಂತಾ ಡಾನ್ಸರ್ಸ್​ ಜತೆ ಮೈಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ. ಸಿನಿಮಾಗಿಂತ ಡಾನ್ಸ್​ ರಿಹರ್ಸಲ್​ನಲ್ಲೇ ತುಂಬಾ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಕೇವಲ ಶಾರ್ಟ್​ ಮತ್ತು ಟೈಟ್​ ಫಿಟ್ಟಿಂಗ್​ ಡ್ರೆಸ್​ನಲ್ಲಿ ಸಮಂತಾ ಸೊಂಟ ಬಳುಕಿಸಿರುವುದನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಈ ವಿಡಿಯೋ ಯೂಟ್ಯೂಬ್​​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಿನ್ನೆಯಷ್ಟೇ (ಜ.6) ಬಿಡುಗಡೆಯಾಗಿರುವ ಹಾಡು ಈಗಾಗಲೇ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇನ್ನು ಈ ಸಾಂಗ್​ನ ವಿಶೇಷತೆ ನೋಡುವುದಾದರೆ, ಸಾಂಗ್​ ಬಿಡುಗಡೆಯಾದ ಹಲವು ದಿನಗಳವರೆಗೆ ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿತ್ತು. ಅಲ್ಲದೆ, ಟಾಪ್​ 100 ಗ್ಲೋಬಲ್​ ಮ್ಯೂಸಿಕ್​ ವಿಡಿಯೋದಲ್ಲಿ ಹೂ ಅಂಟಾವ ಸಾಂಗ್​ ನಂಬರ್​ 1 ಸ್ಥಾನದಲ್ಲಿದೆ. ಇದೊಂದೆ ಸಾಂಗ್​ ಅಲ್ಲದೆ, ತೆಲುಗು ವರ್ಷನ್​ ಶ್ರೀವಳ್ಳಿ ಸಾಂಗ್​ 22ನೇ ಸ್ಥಾನ, ತಮಿಳು ವರ್ಷನ್​ ಸಾಮಿ ಸಾಮಿ ಸಾಂಗ್​ 25 ನೇ ಸ್ಥಾನ, ಹಿಂದಿ ವರ್ಷನ್​ ಹೂ ಅಂಟಾವ ಸಾಂಗ್​ 42ನೇ ಸ್ಥಾನ, ತೆಲುಗು ವರ್ಷನ್​ ಸಾಮಿ ಸಾಮಿ ಸಾಂಗ್​ 51ನೇ ಸ್ಥಾನ ಪಡೆದುಕೊಂಡು ಜಾಗತಿಕ ಮನ್ನಣೆಯನ್ನು ಪಡೆದುಕೊಂಡಿದೆ.

ಪುಷ್ಪ ಚಿತ್ರದಲ್ಲಿ ಈ ಹಾಡನ್ನು ದೇವಿ ಶ್ರೀ ಪ್ರಸಾದ್ ರಚಿಸಿದ್ದು, ಸಾಹಿತ್ಯವನ್ನು ವಿವೇಕ ಮತ್ತು ಚಂದ್ರಬೋಸ್ ಬರೆದಿದ್ದಾರೆ. ಈ ಹಾಡಿನಲ್ಲಿ ”ಸೀರೆ ತೊಟ್ಟರು, ಶಾರ್ಟಸ್ ತೊಟ್ಟರು ಗಂಡಸರು ನೋಡುತ್ತಾರೆ. ಗಂಡಸರು ನಾಚಿಕೆ ಬಿಟ್ಟವರು” ಎಂಬ ಸಾಲುಗಳು ಹಾಡಿನ ಆರಂಭದಲ್ಲೇ ಕೇಳಿಬರುತ್ತವೆ. ಜೊತೆಗೆ, ಹಾಡಿನ ಕೋರಸ್ ಸಾಲುಗಳಲ್ಲಿ ಸಹ ”ಗಂಡಸರ ಬುದ್ಧಿಯೇ ನಿಚ” ಎಂಬ ಅರ್ಥವನ್ನು ಮೂರು ಬಾರಿ ಸಾರುತ್ತಿವೆ. ಸದ್ಯ, ಇಂತಹ ಸಾಲುಗಳೆ ಹಲವು ಪುರುಷರ ಕೆಂಗಣ್ಣಿಗೆ ಕಾರಣವಾಗಿದೆ. ಹಾಡನ್ನು ಬ್ಯಾನ್​ ಮಾಡಬೇಕೆಂಬ ಆಗ್ರಹಗಳು ಕೇಳಿಬಂದಿತ್ತು. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಐಟಂ ಹಾಡನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದ್ದು, ಇದಕ್ಕೆ ಬಾಲಿವುಡ್ ಜನಪ್ರಿಯ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net