

ಕೊಚ್ಚಿ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇರಳದಲ್ಲಿರುವ ಶಬರಿಮಲೆಗೆ ಭೇಟಿ ನೀಡಿದ್ದು, ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದಾರೆ.
ಕೋವಿಡ್-19 ಅಲೆಯ ನಂತರ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರದ ಅಯ್ಯಪ್ಪ ಭಕ್ತರನ್ನು ಭೇಟಿಯಾದ ಪೋಟೊಗಳನ್ನು ರಾಜೀವ್ ಚಂದ್ರಶೇಖರ್ ಅವರು ಕೂ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಶಬರಿಮಲೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರದ ಅಯ್ಯಪ್ಪ ಭಕ್ತರನ್ನು ಭೇಟಿಯಾದ ಹೆಚ್ಚಿನ ಚಿತ್ರಗಳು. ಅವರಲ್ಲಿ ಹಲವರು ಕೋವಿಡ್ ನಂತರ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ ಎಂದು ಫೋಟೋ ಕುರಿತು ಬರೆದುಕೊಂಡಿದ್ದಾರೆ.
ರಾಜೀವ್ ಚಂದ್ರಶೇಖರ್ ಅವರು 26 ವರ್ಷದಿಂದ ಇಲ್ಲಿಗೆ ಭೇಟಿ ನೀಡುತ್ತಿದ್ದು, 'ನನ್ನ 26ನೇ ವರ್ಷದ ಅಯ್ಯಪ್ಪನ ದರ್ಶನ. ಸಾವಿರಾರು ಭಕ್ತರೊಂದಿಗೆ ಶಬರಿಮಲೆಯಲ್ಲಿ' ಎಂದು ಹೇಳಿಕೊಂಡಿದ್ದಾರೆ.