ಸೆಕ್ಸ್​ಗಾಗಿ ಪೈಪೋಟಿಗೆ ಬಿದ್ದು ಗುಂಪಿನಿಂದ ಬಹಿಷ್ಕಾರಗೊಂಡ ಕಾಡಾನೆ: ಮುಂದಾಗಿದೆಲ್ಲ ದುರಂತ!

Elephant
Published on

ರಾಂಚಿ: ಸೆಕ್ಸ್​ಗಾಗಿ ಪೈಪೋಟಿಗೆ ಬಿದ್ದಿದ್ದ ಮತ್ತು ಅನುಚಿತವಾಗಿ ವರ್ತಿಸುತ್ತಿದ್ದ ರಾಕ್ಷಸ ಆನೆಯನ್ನು ಅದರ ಗುಂಪಿನಿಂದ ಹೊರಹಾಕಿದ್ದಕ್ಕೆ ಆಕ್ರೋಶಗೊಂಡ ಆನೆಯು ಕಳೆದ ಎರಡು ತಿಂಗಳಲ್ಲಿ ಸುಮಾರು 16 ಗ್ರಾಮಸ್ಥರನ್ನು ಬಲಿಪಡೆದುಕೊಂಡಿರುವುದಾಗಿ ಅರಣ್ಯಾಧಿಕಾರಿಯೊಬ್ಬರು ಗುರುವಾರ ಮಾಹಿತಿ ನೀಡಿದ್ದಾರೆ.

ರಾಕ್ಷಸ ಗಂಡು ಆನೆಗೆ 15 ಅಥವಾ 16 ವಯಸ್ಸಾಗಿದೆ. 22 ಆನೆಗಳ ಗುಂಪಿನಿಂದ ಹೊರಹಾಕಿದಾಗಿನಿಂದ ಕ್ರೋಧಾವೇಶಕ್ಕೆ ಒಳಗಾಗಿರುವ ಆನೆ, ಸಿಕ್ಕ ಸಿಕ್ಕವರ ಮೇಲೆ ಮುಗಿಬೀಳುತ್ತಾ ತನ್ನ ಸಿಟ್ಟನ್ನು ತೀರಿಸಿಕೊಳ್ಳುತ್ತಿದೆ. ಜಾರ್ಖಂಡ್​ನ ಸಂಥಲ್​ ಪರಗಣ ವಲಯದಲ್ಲಿ ಹುಚ್ಚು ಹುಚ್ಚಾಗಿ ಅಲೆದಾಡುತ್ತಾ ಇಲ್ಲಿಯವರೆಗೂ 16 ಗ್ರಾಮಸ್ಥರನ್ನು ಕೊಂದಿದೆ.

ತುಂಬಾ ಹೀಟ್​ನಲ್ಲಿದ್ದ ಆನೆ ಅನುಚಿತವಾಗಿ ವರ್ತಿಸುತ್ತಿದ್ದಲ್ಲದೆ, ಸೆಕ್ಸ್​ಗಾಗಿ ಇತರೆ ಆನೆಗಳ ಜತೆ ಪೈಪೋಟಿಗೆ ಬಿದ್ದು, ಜಗಳವಾಡುತ್ತಿತ್ತು ಎಂದು ವಲಯ ವಿಭಾಗದ ಅರಣ್ಯಾಧಿಕಾರಿ ಚಂದ್ರ ರೈ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಹೊರಗೆ ಹಾಕಲಾದ ಗುಂಪಿನೊಳಗೆ ಮತ್ತೆ ಸೇರಲು ಯತ್ನಿಸುತ್ತಿರುವ ಆನೆ, ತನ್ನ ಸಂಪೂರ್ಣ ವೇಗ ಮತ್ತು ಅನಿರೀಕ್ಷಿತತೆಯಿಂದ ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ. ಮುಂಜಾನೆ ಬೆಳಗ್ಗೆ ಹಿರಿಯ ದಂಪತಿ ಹೊರಗೆ ಬಂದಿದ್ದಾಗ ರಾಕ್ಷಸ ಆನೆ ದಂಪತಿಯನ್ನು ತನ್ನ ಸೊಂಡಿಲಿನಿಂದ ಮೇಲಕ್ಕೆ ಎತ್ತಿ ಬಡಿದು ಸಾಯಿಸಿದೆ.

ದಾರಿಯಲ್ಲಿ ಆಕಸ್ಮಿಕವಾಗಿ ಸಿಕ್ಕವರನ್ನು ಅದರಲ್ಲೂ ಹತ್ತಿರದಲ್ಲಿ ಎದುರಾದವರನ್ನು ಅಟ್ಟಾಡಿಸಿಕೊಂಡು ಆನೆ ಸಾಯಿಸುತ್ತಿದೆ. ಇನ್ನು ಕೆಲವರು ಆನೆ ಹೋಗುವಾಗ ಸೆಲ್ಫಿಗಾಗಿ ಯತ್ನಿಸಿ ಪ್ರಾಣ ಕಳೆದುಕೊಂಡಿದ್ದಾರೆ.

ಆನೆಯು ಮನೆಗಳಿಗೆ ನುಗ್ಗುತ್ತಿಲ್ಲ ಅಥವಾ ಉದ್ದೇಶಪೂರ್ವಕವಾಗಿ ಜನರ ಮೇಲೆ ಹಲ್ಲೆ ನಡೆಸಿಲ್ಲ" ಎಂದು ರೈ ಹೇಳಿದರು. 'ಅವನನ್ನು ಹಿಂಡಿನಲ್ಲಿ ಮತ್ತೆ ಸ್ವೀಕರಿಸಲಾಗಿದೆಯೇ ಎಂದು ತಿಳಿದುಕೊಳ್ಳಲು ಬಯಸಿದ್ದೇವೆ. ಒಂದು ವೇಳೆ ಸ್ವೀಕರಿಸದಿದ್ದರೆ ಅದೊಂದು ಕೆಟ್ಟ ಆನೆ ಎಂದು ಸಾಬೀತಾಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net