ರೊಬೊಟ್​ ಮಿಮಿಕ್ರಿ ಮಾಡುವುದನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ವೈರಲ್​ ಆಗಿರೋ ಸಖತ್​ ವಿಡಿಯೋ!

Robo
Published on

ನವದೆಹಲಿ: ರೊಬೊಟ್​ಗಳು ಇಂದು ಕೇವಲ ಯಂತ್ರಗಳಾಗಿಯೇ ಉಳಿದಿಲ್ಲ. ಮಾನವನಂತೆಯೇ ಕೆಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುವುದನ್ನು ನೋಡಿದ್ದೇವೆ. ಮಾನವ ಮಾತನಾಡುವುದನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುತ್ತವೆ. ಗಮನಾರ್ಹವೆಂದರೆ, ಕೆಲವೊಂದು ರೆಸ್ಟೋರೆಂಟ್​ಗಳಲ್ಲಿ ರೊಬೊಗಳು ಸರ್ವ್​ ಮಾಡುವುದನ್ನು ನೋಡಿ ಚಕಿತರಾಗಿದ್ದಾವೆ.

ಟೆಕ್ನಾಲಜಿ ಬೆಳೆದಂತೆ ರೊಬೊಟಿಕ್​ ಟೆಕ್ನಾಲಜಿಯಲ್ಲೂ ಹಲವು ಸುಧಾರಣೆಗಳು ಪ್ರತಿನಿತ್ಯ ನಡೆಯುತ್ತಿರುತ್ತವೆ. ಕೇವಲ ಮನುಷ್ಯನಂತೆ ಮಾತಾಡುವುದು ಮಾತ್ರವಲ್ಲ, ಮನುಷ್ಯನ ಭಾವನೆಗಳನ್ನು ಕೂಡ ವ್ಯಕ್ತಪಡಿಸುತ್ತವೆ ಅಂದರೆ ನೀವು ನಂಬುತ್ತೀರಾ? ಆದರೆ ನೀವು ನಂಬಲೇಬೇಕಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ರೊಬೊಟ್ ಒಂದು​ ಮಾನವನ ಭಾವನೆಗಳನ್ನು ಮಿಮಿಕ್ರಿ ಮಾಡಿದೆ. ಇಎಚ್​ಎ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಶೇರ್​ ಆಗಿದೆ. ಅದರಲ್ಲಿರುವ ರೊಬೊ ಹೆಸರು ಅಟ್ಲಾಸ್​. ಇದು ಮಾನವರಂತೆ ಅನೇಕ ವಿಧದ ಮುಖಭಾವಗಳನ್ನು ವ್ಯಕ್ತಪಡಿಸಿದೆ.

ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ಈಗಾಗಲೇ 26ಕ್ಕೂ ಹೆಚ್ಚು ಮಿಲಿಯನ್​ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ, 54 ಸಾವಿರಕ್ಕೂ ಹೆಚ್ಚು ಲೈಕ್ಸ್​ ಮತ್ತು 6 ಸಾವಿರಕ್ಕೂ ಹೆಚ್ಚು ರೀಟ್ವೀಟ್ಸ್​ ಗಿಟ್ಟಿಸಿಕೊಂಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net