ಪೋರ್ನ್​ ವಿಡಿಯೋ ಪ್ರಕರಣದ ಎಫೆಕ್ಟ್​: ಪ್ರಮುಖ ನಿರ್ಧಾರ ತೆಗೆದುಕೊಂಡ ರಾಜ್​ ಕುಂದ್ರಾ!

Rajkundra
Published on

ಮುಂಬೈ: ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಸಿಲುಕಿ ಸದ್ಯ ಜಾಮೀನಿನ ಮೇಲೆ ಹೊರಗಡೆ ಇರುವ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಇದೀಗ ಪ್ರಮುಖ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ.

ಯಾವುದು ಆ ನಿರ್ಧಾರ ಅಂತಾ ನೋಡುವುದಾದರೆ, ಸಾಮಾಜಿಕ ಜಾಲತಾಣಗಳಿಗೆ ರಾಜ್ ಕುಂದ್ರಾ ಗುಡ್​ ಬೈ ಹೇಳಿದ್ದಾರೆ. ಇನ್​ಸ್ಟಾಗ್ರಾಂ ಮತ್ತು ಟ್ವಿಟರ್​ ಖಾತೆಗಳನ್ನು ಕುಂದ್ರಾ ಡಿಲೀಟ್ ಮಾಡಿದ್ದಾರೆ.

ಈ ಹಿಂದೆ ಕುಂದ್ರಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಬಿಜಿ ಆಗಿರುತ್ತಿದ್ದರು. ಕುಟುಂಬದ ಜತೆಗಿನ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಅಶ್ಲೀಲ ವಿಡಿಯೋ ಪ್ರಕರಣ ಕುಂದ್ರಾ ಮೇಲೆ ತೀವ್ರ ಪರಿಣಾಮ ಬೀರಿದ್ದು, ಸಾಮಾಜಿಕ ಜಾಲತಾಣಗಳಿಗೆ ಗುಡ್​ ಬೈ ಹೇಳುವ ನಿರ್ಧಾರಕ್ಕೆ ದೂಡಿದೆ.

ಸುಮಾರು 4 ಗಂಟೆಗಳ ವಿಚಾರಣೆ ಬಳಿಕ ಜುಲೈ 19ರಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾರನ್ನು ಬಂಧಿಸಿದರು. ನೀಲಿ ಚಿತ್ರಗಳನ್ನು ಸೆರೆಹಿಡಿದು ಭಾರತದ ಹೊರಗೆ ಲಭ್ಯವಿರುವ ಅನೇಕ ಪೇಯ್ಡ್​ ಆ್ಯಪ್​ಗಳಲ್ಲಿ ಅಪ್​ಲೋಡ್​ ಮಾಡಿರುವುದರ ವಿರುದ್ಧ ಫೆಬ್ರವರಿ 4ರಂದು ದಾಖಲಾಗಿರುವ ದೂರಿನ ಆಧಾರದ ಮೇಲೆ ಕುಂದ್ರಾ ಬಂಧನವಾಗಿತ್ತು. ಈ ಪ್ರಕರಣದಲ್ಲಿ ಕುಂದ್ರಾ ಸುಮಾರು ಎರಡು ತಿಂಗಳು ಜೈಲುವಾಸ ಅನುಭವಿಸಬೇಕಾಯಿತು. 50,000 ರೂ.ಗಳ ವೈಯಕ್ತಿಕ ಬಾಂಡ್‌ ಮೇಲೆ ಜಾಮೀನು ಪಡೆದಿದ್ದಾರೆ.

ಜೈಲಿನಿಂದ ಹೊರಬಂದ ಬಳಿಕ, ರಾಜ್ ಕುಂದ್ರಾ ಇದೀಗ ನಿಧಾನವಾಗಿ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಸದ್ಯ, ರಾಜ್ ಯಾವುದೇ ರೀತಿಯ ಕಾರ್ಯಕ್ರಮಗಳು ಮತ್ತು ಸಭೆಗಳಲ್ಲಿ ಭಾಗವಹಿಸುತ್ತಿಲ್ಲ. ಇನ್ನು ರಾಜ್ ಕುಂದ್ರಾ ಅವರ ಕುಟುಂಬದೊಂದಿಗೆ ಕೂಡಾ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ, ಶಿಲ್ಪಾ ತನ್ನ ಮಕ್ಕಳಾದ ವಿಯಾನ್ ಮತ್ತು ಶಮಿಶಾ ಅವರೊಂದಿಗೆ ಅಲಿಬಾಗ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಸಂದರ್ಭದಲ್ಲಿಯೂ ರಾಜ್ ಕುಂದ್ರಾ ಅಲ್ಲಿರಲಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net