VIDEO| ಬಿಕಿನಿಯಲ್ಲಿ ಸೊಂಟ ಬಳುಕಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಹಾಟ್​ ಬ್ಯೂಟಿ

Pooja Hegde
Published on

ಹೈದರಾಬಾದ್​: ಸಾಲು ಸಾಲು ಚಿತ್ರಗಳಲ್ಲಿ ಬಿಜಿಯಾಗಿರುವ ಹಾಟ್​ ಬ್ಯೂಟಿ ಪೂಜಾ ಹೆಗ್ಡೆ ಸಿನಿಮಾದಿಂದ ಕೊಂಚ ಬಿಡುವು ಪಡೆದುಕೊಂಡಿದ್ದು ಸದ್ಯ ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್​ನಲ್ಲಿ ಬೀಡು ಬಿಟ್ಟಿದ್ದು, ಕಡಲ ಕಿನಾರೆಯಲ್ಲಿ ಮಿಂದೇಳುತ್ತಿದ್ದಾರೆ.

ಮಾಲ್ಡೀವ್ಸ್​ ಪ್ರವಾಸದ ಪ್ರತಿಯೊಂದು ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ನಟಿ ಪೂಜಾ ಹೆಗ್ಡೆ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಪೂಜಾ ಅವರ ಬಿಕಿನಿ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದೆ.

ಸ್ವಿಮ್ಮಿಂಗ್​ ಫೂಲ್ ಒಳಗೆ ಬ್ರೇಕ್​ಫಾಸ್ಟ್​ ಮಾಡುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೆ, ಬಿಕಿನಿಯಲ್ಲಿ ಡ್ಯಾನ್ಸ್​ ಮಾಡಿರುವ ವಿಡಿಯೋವಂತೂ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಧೂಳೆಬ್ಬಿಸಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಇಳಯದಳಪತಿ ವಿಜಯ್​ ಅಭಿನಯದ ಬೀಸ್ಟ್​ ಚಿತ್ರದಲ್ಲಿ ಒಂದು ಹಂತದ ಚಿತ್ರೀಕರಣ ಮುಗಿಸಿದ ಬೆನ್ನಲ್ಲೇ ಪೂಜಾ ಮಾಲ್ಡೀವ್ಸ್​ಗೆ ಹಾರಿದ್ದಾರೆ. ಮಹೇಶ್​ ಬಾಬು ಅಭಿನಯದ ಹೊಸ ಚಿತ್ರದಲ್ಲಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ. ಆಚಾರ್ಯ ಮತ್ತು ರಾಧೆಶ್ಯಾಮ್​ ಚಿತ್ರ ಪೂರ್ಣಗೊಂಡಿದ್ದು ಬಿಡುಗಡೆಗೆ ಸಿದ್ಧವಾಗಿವೆ. 2022 ಫೆಬ್ರವರಿ 4ಕ್ಕೆ ಆಚಾರ್ಯ ಮತ್ತು 2022 ಜನವರಿ 14ಕ್ಕೆ ರಾಧೆಶ್ಯಾಮ್​ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net