ಮುಂಬೈ ವಿಮಾನ ನಿಲ್ದಾಣದಲ್ಲಿ ಹಾರ್ದಿಕ್​ ಪಾಂಡ್ಯಗೆ ಶಾಕ್​: 5 ಕೋಟಿ ರೂ. ಮೌಲ್ಯದ 2 ವಾಚ್​ ಸೀಜ್!​

Hardik Pandya
Published on

ಮುಂಬೈ: ದುಬೈನಿಂದ ಮರಳಿದ ಟೀಮ್​ ಇಂಡಿಯಾ ಆಲ್​ರೌಂಡರ್​ ಆಟಗಾರ ಹಾರ್ದಿಕ್​ ಪಾಂಡ್ಯ ಬಳಿ 5 ಕೋಟಿ ರೂ. ಮೌಲ್ಯದ ಎರಡು ವಾಚ್​ಗಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್​ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ಮಂಗಳವಾರ ವರದಿಯಾಗಿದೆ.

ಎರಡು ವಾಚ್​ಗಳಿಗೆ ಪಾಂಡ್ಯ ಬಳಿ ಬಿಲ್​ ಇರಲಿಲ್ಲ ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿಯೇ ವಾಚ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಸ್ಟಮ್ಸ್​ ಇಲಾಖೆಯೇ ಟ್ವೀಟ್​ ಮೂಲಕ ಅಧಿಕೃತವಾಗಿ ತಿಳಿಸಿದೆ.

ಟಿ20 ವಿಶ್ವಕಪ್​ ಟೂರ್ನಿ ಮುಗಿದ ಹಿನ್ನೆಲೆಯಲ್ಲಿ ಹಾರ್ದಿಕ್​ ಪಾಂಡ್ಯ ತವರಿಗೆ ವಾಪಾಸ್ಸಾಗಿದ್ದಾರೆ. ದುಬೈನಿಂದ ಭಾನುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹಾರ್ದಿಕ್ ಪಾಂಡ್ಯರನ್ನು ಕಸ್ಟಮ್ಸ್​ ಅಧಿಕಾರಿಗಳು ತಪಾಸಣೆ ನಡೆಸಿದರು. ಈ ವೇಳೆ 5 ಕೋಟಿ ರೂ. ಮೌಲ್ಯದ ಎರಡು ವಾಚ್​ಗಳು ಪತ್ತೆಯಾಗಿವೆ. ಅದರ ಬಿಲ್​ ಕೇಳಿದ್ದಕ್ಕೆ ಇಲ್ಲ ಎಂಬ ಉತ್ತರ ಪಾಂಡ್ಯರಿಂದ ಬಂದಿದೆ. ಹೀಗಾಗಿ ವಾಚ್​ಗಳನ್ನು ಅಧಿಕಾರಿಗಳು ಸೀಜ್​ ಮಾಡಿದ್ದಾರೆ.

ಎಎನ್​ಐ ಪ್ರಕಾರ, ಹಾರ್ದಿಕ್ ಅವರ ಸಹೋದರ, ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರು ಕಳೆದ ವರ್ಷ ಬಹಿರಂಗಪಡಿಸದ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆದು ಇದೇ ವೇಳೆ ತಪಾಸಣೆ ನಡೆಸಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net