

ಅಹಮದಾಬಾದ್: ತವರು ಭೂಮಿ ಗುಜರಾತಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದು, ಇದರ ನಡುವೆ ತಮ್ಮ ಮಾನವೀಯ ಗುಣದಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಶುಕ್ರವಾರ ಪ್ರಧಾನಿ ಮೋದಿ ಅವರು ಅಹಮದಾಬಾದ್ನಿಂದ ಗಾಂಧಿನಗರ ಕಡೆ ಹೊರಟಿದ್ದಾಗ ಮಾರ್ಗ ಮಧ್ಯೆ ತಮ್ಮ ಬೆಂಗಾವಲು ವಾಹವನ್ನು ನಿಲ್ಲಿಸಿ, ಆಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟರು. ಈ ಮೂಲಕ ವಿವಿಐಪಿ ಸಂಸ್ಕೃತಿಯನ್ನು ಬದಿಗಿಟ್ಟು, ಮಾನವೀಯತೆಗಿಂತ ದೊಡ್ಡದು ಯಾವುದು ಇಲ್ಲ ಎಂಬ ಸಂದೇಶವನ್ನು ಸಾರಿದರು.
ಈ ಹಿಂದೆ 2017ರಲ್ಲಿ ಪ್ರಧಾನಿ ಮೋದಿ ಅವರು ವಿಐಪಿ ಬದಲಿಗೆ ಇಪಿಐ (ಎಲ್ಲರೂ ಮುಖ್ಯ) ಎಂದು ಹೇಳಿದ್ದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ. ಇಪಿಐ ಅಂದರೆ ಎವೆರಿ ಪರ್ಸನ್ ಹ್ಯಾಸ್ ವ್ಯಾಲ್ಯೂ ಆ್ಯಂಡ್ ಇಂಪಾರ್ಟೆನ್ಸ್ (ಪ್ರತಿಯೊಬ್ಬ ವ್ಯಕ್ತಿಗೂ ಮೌಲ್ಯ ಮತ್ತು ಪ್ರಾಮುಖ್ಯತೆ ಇರುತ್ತದೆ). ಪ್ರಧಾನಿ ಅವರು ಅಂದು ಹೇಳಿದ ಮಾತನ್ನು ಪಾಲಿಸುತ್ತಲೇ ಬರುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.
ವಿಐಪಿ ಸಂಸ್ಕೃತಿಯ ಸಂಕೇತವಾದ ವಾಹನಗಳ ಮೇಲಿನ ಕೆಂಪು ದೀಪಗಳ ಬಳಕೆಯನ್ನು ಸಹ ಪ್ರಧಾನಿ ಮೋದಿ ಕೊನೆಗೊಳಿಸಿದ್ದಾರೆ. (ಏಜೆನ್ಸೀಸ್)