

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಬಹುಭಾಷ ನಟಿ ರಾಕುಲ್ ಪ್ರೀತ್ ಸಿಂಗ್, ಆಗಾಗ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿರುತ್ತಾರೆ. ಇದೀಗ ತಮ್ಮ ಇನ್ಸ್ಟಾಗ್ರಾಂನಲ್ಲಿ ಬಿಕಿನಿ ಫೋಟೋವನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳು ಮಾತ್ರವಲ್ಲದೆ, ಸಿನಿ ಮಂದಿಯ ಹುಬ್ಬೇರುವಂತೆ ಮಾಡಿದ್ದಾರೆ.
ಮ್ಯಾಗಜಿನ್ ಕವರ್ ಫೋಟೋ ಒಂದಕ್ಕೆ ರಾಕುಲ್ ಬಿಕಿನಿ ಫೋಟೋಶೂಟ್ ಮಾಡಿಸಿದ್ದಾರೆ. ಇದಕ್ಕೆ ಸಂಬಂಧಿದ ವಿಡಿಯೋವನ್ನು ಸ್ಪೈಸಿ ಇಂಡಿಯಾ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಿತ್ತಳೆ ಬಣ್ಣದ ಬಿಕಿನಿಯಲ್ಲ ರಾಕುಲ್ ತಮ್ಮ ಮಾದಕ ಮೈಮಾಟವನ್ನು ಪ್ರದರ್ಶನ ಮಾಡಿದ್ದು, ಪಡ್ಡೆ ಹುಡುಗರ ಮೈ ಬಿಸಿ ಏರಿಸಿದೆ.
ಸಿನಿಮಾ ವಿಚಾರಕ್ಕೆ ಬಂದರೆ, ರಾಕುಲ್ ಮೊದಲು ಕನ್ನಡದ ಗಿಲ್ಲಿ ಚಿತ್ರದಲ್ಲಿ ಕಾಣಿಕೊಂಡರು. ಆದರೆ ಯಶಸ್ಸು ಸಿಗಲಿಲ್ಲ. ಬಳಿಕ ಚಿತ್ರರಂಗದಿಂದ ಕೆಲ ವರ್ಷ ದೂರ ಉಳಿದಿದ್ದ ಅವರು ತೆಲುಗು ಚಿತ್ರರಂಕ್ಕೆ ಪದಾರ್ಪಣೆ ಮಾಡಿದರು. ಅಲ್ಲಿಂದಾಚೆಗೆ ಸಾಲು ಸಾಲು ಚಿತ್ರಗಳಲ್ಲಿ ರಾಕುಲ್ ಅಭಿನಯಿಸುತ್ತಾ ಬಂದಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೆಚ್ಚು ಸಕ್ರೀಯರಾಗಿದ್ದ ರಾಕುಲ್ ಇದೀಗ ಬಾಲಿವುಡ್ನಲ್ಲಿ ಮಿಂಚು ಹರಿಸುತ್ತಿದ್ದಾರೆ. (ಏಜೆನ್ಸೀಸ್)