

ಚಂಡೀಗಢ: ಪಂಜಾಬ್ನಲ್ಲಿ ಫೆ.20ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಶನಿವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಸರ್ಕಾರಿ ಉದ್ಯೋಗದಲ್ಲಿ ಯುವಜನರಿಗೆ ಶೇಕಡ 75, ಖಾಸಗಿ ಉದ್ಯೋಗದಲ್ಲಿ ಶೇಕಡ 50 ಮೀಸಲು ಒದಗಿಸುವುದಾಗಿ ಭರವಸೆ ನೀಡಿದೆ. ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇಕಡ 35 ಮೀಸಲು, ಪದವೀಧರರಿಗೆ ಎರಡು ವರ್ಷ ನಿರುದ್ಯೋಗ ಭತ್ಯೆ 4000 ರೂಪಾಯಿ, ರಾಜ್ಯದ ಆಥಿರ್ಕತೆಯ ಪುನಶ್ಚೇತನಕ್ಕಾಗಿ ಭಾರಿ ಪ್ರಮಾಣದ ಮೂಲಸೌಕರ್ಯ ನಿರ್ಮಾಣ ಮುಂತಾದ ಭರವಸೆಗಳು ಪ್ರಣಾಳಿಕೆಯಲ್ಲಿವೆ. ಚುನಾವಣೆಗೆ ನಾಮನಿರ್ದೇಶನ ಮಾಡುವ ಮುನ್ನ ಡೋಪ್ ಟೆಸ್ಟ್ ಕಡ್ಡಾಯ ಮಾಡುವುದಾಗಿಯೂ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಕೇಂದ್ರ ಸಚಿವರಾದ ಹರದೀಪ್ ಸಿಂಗ್ ಪುರಿ, ಸೋಮ್ ಪ್ರಕಾಶ್, ಬಿಜೆಪಿ ನಾಯಕರಾದ ದುಷ್ಯಂತ್ ಗೌತಮ್, ತರುಣ್ ಛುಗ್, ಅಮರಿಂದರ್ ಸಿಂಗ್ ಅವರ ಪುತ್ರ ರಣೀಂದರ್ ಸಿಂಗ್ ಮತ್ತು ಇತರರ ಉಪಸ್ಥಿತಿಯಲ್ಲಿ ಪ್ರಣಾಳಿಕೆ ಬಿಡುಗಡೆಯಾಗಿದೆ.
ಎರಡನೇ ಹಂತದಲ್ಲಿ 12 ಅನಕ್ಷರಸ್ಥ ಅಭ್ಯರ್ಥಿಗಳು: ಉತ್ತರ ಪ್ರದೇಶದಲ್ಲಿ ೆ. 14ರಂದು ಎರಡನೇ ಹಂತದಲ್ಲಿ ಚುನಾವಣೆ ಎದುರಿಸುವ 55 ಕ್ಷೇತ್ರಗಳಲ್ಲಿ 114 ಅಭ್ಯಥಿರ್ಗಳು ಎಂಟನೇ ತರಗತಿ ತನಕ ಓದಿದವರು. 12 ಅಭ್ಯರ್ಥಿಗಳು ಅನಕ್ಷರಸ್ಥರು. 102 ಅಭ್ಯಥಿರ್ಗಳು ಸ್ನಾತಕೋತ್ತರ ಪದವೀಧರರು, ಆರು ಅಭ್ಯರ್ಥಿಗಳು ಪಿಎಚ್ಡಿ ಪಡದವರು ಎಂದು ಅಸೋಸಿಯೇಷನ್ ಆ್ ಡೆಮಾಕ್ರಟಿಕ್ ರಿಾಮ್ಸ್ರ್ (ಎಡಿಆರ್) ವರದಿ ತಿಳಿಸಿದೆ. 586 ಅಭ್ಯಥಿರ್ಗಳು ಕಣದಲ್ಲಿದ್ದಾರೆ.
ಕಾಂಗ್ರೆಸ್ನ ಓಲೈಕೆಗೆ ತಲೆದೂಗಬೇಡಿ: ಉತ್ತರಾಖಂಡದಲ್ಲಿ ಫೆ.14ರಂದು ಮತದಾನ ನಡೆಯಲಿದ್ದು, ರುದ್ರಪುರದಲ್ಲಿ ಕೊನೆಯ ದಿನದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ದೇವಭೂಮಿಯಲ್ಲಿ ಮುಸ್ಲಿಂ ಯೂನಿವರ್ಸಿಟಿಯನ್ನು ಸ್ಥಾಪಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಕಾಂಗ್ರೆಸ್ ಪಕ್ಷದ ಇಂತಹ ಓಲೈಕೆ ರಾಜಕಾರಣಕ್ಕೆ ತಲೆದೂಗಬೇಡಿ. ಅವರ ಕಾರ್ಯಸೂಚಿ ಯಶಸ್ವಿಯಾಗುವಂತೆ ಮಾಡಬೇಡಿ. ಎಂದು ಪ್ರಧಾನಿ ಮೋದಿ ಮತದಾರರಿಗೆ ಮನವಿ ಮಾಡಿದರು.