ಪ್ರೀತಿ ನಿರಾಕರಿಸಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿನಿಗೆ ಗುಂಡಿಕ್ಕಿದ ಯುವಕ: ಸಿಸಿಟಿಯಲ್ಲಿ ಭಯಾನಕ ದೃಶ್ಯ ಸೆರೆ

Firing
Published on

ಪಟನಾ: ಶಾಲಾ ವಿದ್ಯಾರ್ಥಿನಿಯ ಕುತ್ತಿಗೆಗೆ ಯುವಕನೊಬ್ಬ ಗುಂಡಿಕ್ಕಿರುವ ಆಘಾತಕಾರಿ ಘಟನೆ ಬಿಹಾರ ರಾಜಧಾನಿ ಪಟನಾದಲ್ಲಿ ಬುಧವಾರ ನಡೆದಿದೆ. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ದಾಖಲಾಗಿದ್ದು, ಅದಕ್ಕೆ ಸಂಬಂಧಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪ್ರೀತಿ ನಿರಾಕರಿಸಿದ್ದೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಬ್ಯೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಿಪರಾದ ಇಂದ್ರಪುರಿ ಏರಿಯಾದಲ್ಲಿ ಘಟನೆ ನಡೆದಿದೆ.

ವಿಡಿಯೋದಲ್ಲಿ ಏನಿದೆ?

ಬ್ಯಾಗ್ ಒಂದನ್ನು​ ಹಿಡಿದುಕೊಂಡು ಬರುವ ಯುವಕ, ತನ್ನ ಹಿಂದೆ ಹುಡುಗಿ ಬರುವುದನ್ನು ನೋಡಿ ಅಲ್ಲಿಯೇ ನಿಲ್ಲುತ್ತಾನೆ. ಹುಡುಗಿ ಜನರಿಲ್ಲದ ಕಿರಿದಾದ ರಸ್ತೆ ಕಡೆ ಬಂದು ಯುವಕನನ್ನು ದಾಟಿ ಮುಂದೆ ಹೋಗುವಾಗ ಹಿಂದೆ ಬ್ಯಾಗ್​ನಿಂದ ರಿವಾಲ್ವರ್​ ತೆಗೆದುಕೊಳ್ಳುವ ಆತ ಹುಡುಗಿಯ ಕುತ್ತಿಗೆಗೆ ಗುಂಡಿಕ್ಕುತ್ತಾನೆ. ಹುಡುಗಿ ದಿಢೀರನೇ ನೆಲಕ್ಕೆ ಕುಸಿಯುತ್ತಿದ್ದಂತೆ ಆತ ಅಲ್ಲಿಂದ ಪರಾರಿ ಆಗುತ್ತಾನೆ.

ಸಂತ್ರಸ್ತೆ ಪ್ರೀತಿ ನಿರಾಕರಿಸಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಂತ್ರಸ್ತ ಹುಡುಗಿ ತರಕಾರಿ ವ್ಯಾಪಾರಿಯ ಮಗಳು ಹಾಗೂ 9ನೇ ತರಗತಿ ವಿದ್ಯಾರ್ಥಿನಿ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net