ಒಳ ಅಂಗಾಂಗಗಳೇ ಇಲ್ಲದ ಸತ್ತ ಕೀಟದಿಂದ ವಾಕಿಂಗ್! ನಂಬಲಾಗದ ದೃಶ್ಯ, ಕಾರಣ ತಿಳಿದರಂತೂ ಬೆರಗಾಗ್ತೀರಿ!

Bug
Published on

ನವದೆಹಲಿ: ನಾವು ಪ್ರಕೃತಿಯ ಬಗ್ಗೆ ಯೋಚಿಸಿದಾಗ ನಮ್ಮ ತಲೆಗೆ ಮೊದಲು ಬರುವ ಸಂಗತಿಗಳೆಂದರೆ ದಟ್ಟವಾದ ಕಾಡುಗಳು, ಅಗಾಧವಾದ ಸಾಗರಗಳು, ಸುಂದರವಾದ ಸಸ್ಯ ಮತ್ತು ಪ್ರಾಣಿಗಳು. ಆದರೆ, ನಮ್ಮಲ್ಲಿ ಪ್ಯಾರಾಸೈಟ್​ (ಪರಾವಲಂಬಿ ಜೀವಿಗಳು)ಗಳು ಸಹ ಇವೆ. ಅವುಗಳು ಇತರ ಪ್ರಾಣಿಗಳ ಮೆದುಳನ್ನು ನಿಯಂತ್ರಿಸಿ, ತಮ್ಮ ಗುಲಾಮರನ್ನಾಗಿ ಮಾಡುಕೊಳ್ಳುತ್ತವೆ ಎಂಬುದನ್ನು ಊಹಿಸಲು ಸಹ ಹೋಗುವುದಿಲ್ಲ. ಆದರೆ, ಇತ್ತೀಚೆಗೆ ಜಾಲತಾಣದಲ್ಲಿ ನ್ಯೂರೋಪ್ಯಾರಾಸೈಟ್​ (ನರಕ್ಕೆ ಸಂಬಂಧಿಸಿದ ಪರಾವಲಂಬಿ ಜೀವಿ) ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿದ್ದು, ಅದು ನೆಟ್ಟಿಗರನ್ನು ಚಕಿತಗೊಳಿಸಿದೆ.

ವಿಡಿಯೋದಲ್ಲಿ ನ್ಯೂರೋಪ್ಯಾರಾಸೈಟ್, ಮೃತಪಟ್ಟ ಕೀಟವೊಂದರ ಮನಸ್ಸನ್ನು ನಿಯಂತ್ರಿಸಿ, ಅದು ನಡೆಯುವಂತೆ ಮಾಡಿದೆ. ವಿಡಿಯೋ ನೋಡಿದರೆ, ಒಮ್ಮೆ ಕಣ್ಣುಗಳನ್ನು ನೀವು ಅರಳಿಸುವುದಂತೂ ಗ್ಯಾರೆಂಟಿ.

ವೈರಲ್​ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಉದ್ಯೋಗಿ ಡಾ. ಸಾಮ್ರಾಟ್​ ಗೌಡ ಎಂಬುವರು ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಬಹುತೇಕ ಒಳ ಅಂಗಾಂಗಗಳೇ ಇಲ್ಲದ ಸತ್ತ ಕೀಟವೊಂದು ಸಹಜವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ನಿಜಕ್ಕೂ ನಮ್ಮ ಕಣ್ಣನ್ನು ನಾವೇ ನಂಬಲಾಗದ ದೃಶ್ಯವಿದು.

ಒಂದು ನ್ಯೂರೋಪ್ಯಾರಾಸೈಟ್​, ಸತ್ತ ಕೀಟದ ಮೆದುಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ಅದು ನಡೆಯುವಂತೆ ಮಾಡಿದೆ.... ಇದನ್ನೇ ಜೊಂಬೀ ಎಂದು ಕರೆಯಲಾಗುವುದು ಎಂದು ವಿಡಿಯೋಗೆ ಅಡಿಬರಹವನ್ನು ನೀಡಲಾಗಿದೆ. ಅಂದಹಾಗೆ ಜೊಂಬಿ ಎಂಬುದು ಶವವನ್ನು ಪುನರುಜ್ಜೀವನಗೊಳಿಸುವ ಮೂಲಕ ರಚಿಸಲಾದ ಪೌರಾಣಿಕ ಶವಗಳ ಶಾರೀರಿಕ ಪುನಾರಗಮನವಾಗಿದೆ. ಜೋಂಬಿಸ್ ಸಾಮಾನ್ಯವಾಗಿ ಹಾಲಿವುಡ್​ನ ಭಯಾನಕ ಮತ್ತು ಫ್ಯಾಂಟಸಿ ಪ್ರಕಾರದ ಸಿನಿಮಾಗಳಲ್ಲಿ ಕಾಣಬಹುದಾಗಿದೆ.

ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಕೆಲವು ಪ್ಯಾರಾಸೈಟ್​ (ಪರಾವಲಂಬಿ ಜೀವಿ)ಗಳು ತಮ್ಮ ಅತಿಥಿಗಳನ್ನು ಅಥವಾ ತಾವು ಒಳಹೊಕ್ಕುವ ಜೀವಿಗಳನ್ನು ಹೆಚ್ಚು ಕಡಿಮೆ ವಾಕಿಂಗ್ ಡೆಡ್​ ಆಗಿ ಪರಿವರ್ತಿಸುತ್ತವೆ. ಮನಸ್ಸನ್ನು ನಿಯಂತ್ರಿಸುವುದರಲ್ಲಿ ಮಾಸ್ಟರ್​ಗಳಾಗಿರುವ ಪ್ಯಾರಾಸೈಟ್​ಗಳು ತಮ್ಮ ಅತಿಥಿಗಳನ್ನು ಒಳಗಿನಿಂದ ನಿಯಂತ್ರಿಸುವ ಮೂಲಕ ತಮಗೆ ಪ್ರಯೋಜನಕಾರಿಯಾದ ಸ್ವಯಂ-ವಿನಾಶಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಜೋಂಬಿಗಳು ನಮ್ಮ ಪರಿಸರದ ಭಾಗ ಎಂಬುದನ್ನು ಈ ವಿಡಿಯೋ ಇದೀಗ ಸಾಬೀತುಪಡಿಸಿದೆ. ಜೋಂಬಿಗಳನ್ನು ಕೇವಲ ಕಾದಂಬರಿ, ಪುಸ್ತಕಗಳು ಮತ್ತು ಚಲನಚಿತ್ರಗಳಲ್ಲಿ ಮಾತ್ರ ಚಿತ್ರಿಸಲಾಗಿಲ್ಲ ಎಂಬುದನ್ನು ವೈರಲ್​ ಆಗಿರುವ ಈ ವಿಡಿಯೋ ಸಾಕ್ಷಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net