

ಕೊಯಿಕ್ಕೋಡ್: ಅನೇಕ ಬಾರಿ ವೇಗದ ಮಿತಿಯನ್ನು ಮೀರಿದ್ದಕ್ಕೆ ಕಣ್ಣೂರು ಮೂಲದ ವ್ಯಕ್ತಿಯೊಬ್ಬನಿಗೆ ಕೇರಳದ ಮೋಟಾರು ವಾಹನ ಇಲಾಖೆ ಬರೋಬ್ಬರಿ 1,33,500 ರೂಪಾಯಿ ದಂಡ ವಿಧಿಸಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಕಣ್ಣೂರು ಮೂಲದ ನಿವಾಸಿ ಭಾರೀ ದಂಡದಿಂದಾಗಿ ಕಂಗಾಲಾಗಿದ್ದಾರೆ. ಅವರ ಎಸ್ಯುವಿ ಕಾರು ಅನೇಕ ಬಾರಿ ವೇಗದ ಮಿತಿಯನ್ನು ಮೀರಿದೆ. ಕೊಯಿಕ್ಕೋಡ್ ಉತ್ತರ ವಲಯದಲ್ಲಿರುವ ಕಣ್ಗಾವಲು ಕ್ಯಾಮೆರಾದಲ್ಲಿ ಸುಮಾರು 89 ಬಾರಿ ಎಸ್ಯುವಿ ಕಾರು ಸೆರೆಯಾಗಿದೆ. ಕಳೆದ 2022ರ ಜನವರಿಯೊಂದರಲ್ಲೇ ಇದೇ ಕಾರಣಕ್ಕೆ ಏಳು ಬಾರಿ ದಂಡ ವಿಧಿಸಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಎಸ್ಯುವಿ ವಾಹನವು ಅಪಘಾತಕ್ಕೀಡಾದ ನಂತರ ವೇಗದ ಮಿತಿಯ ನಿಯಮ ಉಲ್ಲಂಘಟನೆ ಪ್ರಕರಣಗಳ ಸಂಖ್ಯೆ ಸಂಖ್ಯೆ ಬೆಳಕಿಗೆ ಬಂದಿದೆ. ದಂಡವನ್ನು ಪಾವತಿಸದ ಕಾರಣ ಮೋಟಾರು ವಾಹನ ಇಲಾಕೆ ಎಸ್ಯುವಿಯನ್ನು ಕಪ್ಪುಪಟ್ಟಿಗೆ ಸೇರಿಸಿದೆ ಎಂದು ತಿಳಿದುಬಂದಿದೆ. ಇದರಿಂದ ಎಚ್ಚೆತ್ತ ಕಾರಿನ ಮಾಲಿಕ ಬಳಿಕ ಕೊಯಿಕ್ಕೋಡ್ ಆರ್‌ಟಿಒ ಕಚೇರಿಗೆ ತೆರಳಿ ದಂಡ ಪಾವತಿಸಿದ್ದಾರೆ. (ಏಜೆನ್ಸೀಸ್)