ಇಳಿ ವಯಸ್ಸಿನಲ್ಲಿ ಕಾರು ಓಡಿಸುವುದನ್ನು ಕಲಿತ 90ರ ವೃದ್ಧೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಮಹಾಪೂರ!

Grandma
Published on

ಭೋಪಾಲ್​: ಕಲಿಕೆಗೆ ಯಾವುದೇ ವಯಸ್ಸಿನ ಹಂಗಿಲ್ಲ ಎಂಬ ಮಾತಿಗೆ ಮಧ್ಯ ಪ್ರದೇಶದ ದೇವಾಸ್​ ಜಿಲ್ಲೆಯ 90 ವರ್ಷದ ವೃದ್ಧೆ ತಾಜಾ ಉದಾಹರಣೆ ಆಗಿದ್ದಾರೆ. ಇಳಿವಯಸ್ಸಿನಲ್ಲೂ ವೃದ್ಧೆ ಕಾರು ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಜ್ಜಿ ಇದೀಗ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.

ವೃದ್ಧೆಯ ಹೆಸರು ರೇಷಮ್​ ಬಾಯ್​ ತನ್ವರ್. ಇವರು ದೇವಾಸ್​ ಜಿಲ್ಲೆಯ ಬಿಲವಾಲಿ ಪ್ರದೇಶದ ನಿವಾಸಿ. ಅವರ ಇಡೀ ಕುಟುಂಬ ಚಾಲನಾ ಕೌಶಲ್ಯ ಹೊಂದಿರುವುದರಿಂದ ವೃದ್ಧೆಯು ಕೂಡ 90ನೇ ವಯಸ್ಸಿನಲ್ಲಿ ಕಾರು ಓಡಿಸುವುದನ್ನು ಕಲಿತುಕೊಂಡಿದ್ದಾರೆ. ​

ನನಗೆ ಡ್ರೈವಿಂಗ್​ ಮಾಡುವುದೆಂದರೆ ತುಂಬಾ ಖುಷಿ. ನಾನು ಕಾರು ಮಾತ್ರವಲ್ಲದೆ ಟ್ರ್ಯಾಕ್ಟರ್​ಗಳನ್ನು ಸಹ ಓಡಿಸುತ್ತೇನೆಂದು ಅಜ್ಜಿ ಸಂತಸ ವ್ಯಕ್ತಪಡಿಸಿದ್ದಾರೆ.

ಇಳಿ ವಯಸ್ಸಿನಲ್ಲಿ ಅಜ್ಜಿಯ ಕಲಿಕಾ ಹುಮ್ಮಸ್ಸಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​​ ಸಿಂಗ್​ ಚೌಹಾಣ್​ ಫಿದಾ ಆಗಿದ್ದು, ಟ್ವೀಟ್​ ಮೂಲಕ ಹಿರಿಯ ಮಹಿಳೆಯನ್ನು ಅಭಿನಂದಿಸಿದ್ದಾರೆ. ಈ ವಯಸ್ಸಿನಲ್ಲಿ ಡ್ರೈವಿಂಗ್​ ಕಲಿತಿರುವ ಅವರು ಎಲ್ಲರಿಗೂ ಸ್ಫೂರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net