

ಲಿಸ್ಬನ್: ಪೋರ್ಚುಗಲ್ ಮೂಲದ 26 ವರ್ಷದ ರೇಸರ್ ಮಿಗುಯೆಲ್ ಒಲಿವೆರಾ, 11 ವರ್ಷಗಳ ಕಾಲ ತನ್ನ ಸ್ಟೆಪ್ ಸಿಸ್ಟರ್ ಅಥವಾ ಮಲತಂಗಿಯನ್ನು ಪ್ರೀತಿಸುತ್ತಿದ್ದದ್ದನ್ನು ಬಹಿರಂಗ ಪಡಿಸಿದ್ದಲ್ಲದೇ, ಆಕೆಯೊಂದಿಗೆ ಮದುವೆ ಮಾಡಿಕೊಳ್ಳುವ ಮೂಲಕ ಅನೇಕರ ಹುಬ್ಬೇರುವಂತೆ ಮಾಡಿದ್ದರು.
ಹೌದು, ಮೋಟೋ ಜಿಪಿ ಸ್ಟಾರ್ ಆದ ಒಲಿವೇರಾ, ತಮ್ಮ ತಂಗಿಯೊಂದಿಗಿನ ಸಂಬಂಧವನ್ನು 11 ವರ್ಷಗಳ ಕಾಲ ಮುಚ್ಚಿಟ್ಟಿದ್ದರಂತೆ. ಈ ಕುರಿತು ಪೋರ್ಚುಗೀಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, “ನನ್ನ ತಂದೆಯ ಎರಡನೇ ಹೆಂಡತಿ ಅಂದರೆ ನನ್ನ ಮಲತಾಯಿಯ ಮಗಳು ಆಂಡ್ರಿಯಾ ಅವರನ್ನು ನಾನು ಮದುವೆಯಾಗಿದ್ದೇನೆ ಮತ್ತು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ” ಎಂದಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಇವರಿಬ್ಬರೂ ವಿವಾಹವಾಗಿದ್ದು, ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಮಿಗುಯೆಲ್ ಒಲಿವೆರಾ ಪೋಸ್ಟ್ ಕೂಡ ಮಾಡಿದ್ದರು. ತನ್ನ ಸಹೋದರಿಯನ್ನೇ ಮದುವೆಯಾಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಆದರೆ ಈಗ ಮತ್ತೊಮ್ಮೆ ಸುದ್ದಿಯಲ್ಲಿರುವ ಈ ಜೋಡಿ, ಇತ್ತೀಚೆಗೆ ಅಲ್ಟ್ರಾಸೌಂಡ್ ಮತ್ತು ಬೇಬಿ ಬಂಪ್ ಚಿತ್ರವನ್ನು ಪೋಸ್ಟ್ ಮಾಡಿ, ನಮ್ಮ ಜೀವನದ ನೂತನ ಅತಿಥಿಗಾಗಿ ಕಾಯುತ್ತಿರುವುದಾಗಿ ತಮ್ಮ ಉತ್ಸುಕತೆ ಹಂಚಿಕೊಂಡಿದ್ದಾರೆ.
ಆದರೆ, ಅವರ ಪೋಸ್ಟ್ಗೆ ನೆಗಿಟಿವ್ ಕಾಮೆಂಟ್ಗಳೇ ಹೆಚ್ಚಾಗಿವೆ. ತಂಗಿಯ ಜತೆ ಸಂಬಂಧ ಇಟ್ಟುಕೊಂಡಿದ್ದಲ್ಲದೆ, ಇದೀಗ ಇಬ್ಬರು ಮಗು ಮಾಡಿಕೊಳ್ಳುತ್ತಿರುವುದು ಸಹ ಅಕ್ಷಮ್ಯ ಅಪರಾಧ. ನಿಮ್ಮಿಂದ ಸಂಬಂಧಗಳಿಗೆ ಬೆಲೆ ಇಲ್ವಾ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. (ಏಜೆನ್ಸೀಸ್)